23 October 2025 | Join group

ಮೂಡುಬಿದಿರೆಯಲ್ಲಿ ಬಾಲಕಿ ಮೇಲೆ 'ಗ್ಯಾಂಗ್ ರೇಪ್' ಗೆ ಯತ್ನ, ನಾಲ್ವರು ಆರೋಪಿಗಳು ಅರೆಸ್ಟ್.!

  • 15 Oct 2025 08:49:53 AM

ಮೂಡುಬಿದಿರೆ : ಬಾಲಕಿ ಮೇಲೆ ಗ್ಯಾಂಗ್ ರೇಪ್ ಗೆ ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನಿಡ್ಡೋಡಿಯ ಮನೆಯೊಂದರಲ್ಲಿ ಸೋಮವಾರ ಈ ಘಟನೆ ನಡೆದಿದೆ.

 

ಮನೆಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಯತ್ನಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

 

ನಂತರ ಬಾಲಕಿ ಮತ್ತು ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ನಾಲ್ವರು ಗ್ಯಾಂಗ್ ರೇಪ್ ನಡೆಸಲು ಸಿದ್ದತೆ ನಡೆಸಿದ್ದರು ಎನ್ನುವ ವಿಚಾರ ಬಯಲಿಗೆ ಬಂದಿದೆ.

 

ಬಂಧಿತರನ್ನು ಮಹೇಶ, ಯಜೇಶ್, ದಿಲೀಪ್ ಹಾಗೂ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ನಾಲ್ವರು ಆರೋಪಿಗಳ ವಿರುದ್ಧ ಮೂಡುಬಿದಿರೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.