23 October 2025 | Join group

ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿ ಮೂವರು ಮಕ್ಕಳು ಜಲಸಮಾಧಿ.!

  • 15 Oct 2025 08:52:35 AM

ಉಡುಪಿ: ಉಡುಪಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಮೀನು ಹಿಡಿಯಲು ಹೋಗಿ ಮೂವರು ಮಕ್ಕಳು ಜಲಸಮಾಧಿಯಾಗಿದ್ದಾರೆ.

 

ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಮಕ್ಕಳು ನೀರು ಪಾಲಾದ ಘಟನೆ ಹೊಸಹಿತ್ಲು ಬೀಚ್ ನಲ್ಲಿ ನಡೆದಿದೆ.

 

ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸ ಹಿತ್ಲು ಬೀಚ್ ನಲ್ಲಿ ಘಟನೆ ನಡೆದಿದೆ. ಸಂಕೇತ್(16), ಸೂರಜ್(15), ಆಶಿಶ್(14) ನೀರು ಪಾಲಾದ ಮಕ್ಕಳು.

 

ಸದ್ಯ ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮೃತರಲ್ಲಿ ಓರ್ವ ಪಿಯುಸಿ ವಿದ್ಯಾರ್ಥಿಯಾಗಿದ್ರೆ, ಮತ್ತಿಬ್ಬರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಘಟನೆ ನಡೆದ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.