23 October 2025 | Join group

ರಾಜ್ಯದ ಯಾವ ಮೂಲೆಯಲ್ಲಾದರೂ ಕಂಬಳ ನಡೆಸಬಹುದು -ಹೈಕೋರ್ಟ್​ ಆದೇಶ

  • 15 Oct 2025 06:53:38 PM

ಮಂಗಳೂರು: ಕರಾವಳಿಯ ಕಂಬಳವನ್ನು ರಾಜ್ಯದ ಯಾವ ಮೂಲೆಯಲ್ಲಾದರೂ ನಡೆಸಬಹುದು ಎಂದು ಹೈಕೋರ್ಟ್ ಮೌಖಿಕ ಆದೇಶ ನೀಡಿದೆ. ಈ ಸಂಬಂಧ ಶೀಘ್ರದಲ್ಲೇ ವಿವರವಾದ ಆದೇಶ ಬಿಡುಗಡೆ ಆಗಲಿದೆ. ಹೈ ಕೋರ್ಟ್ ರಾಜ್ಯವ್ಯಾಪಿ ಕಂಬಳಕ್ಕೆ ಗ್ರೀನ್ ಸಿಗ್ನಲ್ ಆದೇಶ ಹೊರಡಿಸುತ್ತಿದ್ದಂತೆ ಕಂಬಳ ಪ್ರೇಮಿಗಳು, ಅಭಿಮಾನಿಗಳು ಹಿರಿ ಹರಿ ಹಿಗ್ಗಿದ್ದಾರೆ. 

 

ಬೆಂಗಳೂರಲ್ಲಿ ಕಂಬಳವಾದಾಗ PETA (India's Animal Rights Organisation) ದವರು ನ್ಯಾಯಾಲಯದ ಮೊರೆ ಹೋಗಿದ್ದರು. ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ಹಿಂಸಿಸಲಾಗುತ್ತದೆ ಎನ್ನುವುದು ಪೆಟಾದವರ ವಾದವಾಗಿತ್ತು. ಇದರಿಂದ ಮೈಸೂರು ಹಾಗೂ ಶಿವಮೊಗ್ಗದಲ್ಲಿ ಕಂಬಳ ನಡೆಸಲು ಅಡ್ಡಿಯಾಗಿತ್ತು. ಕೋಣಗಳನ್ನು ವಾಹನಗಳಲ್ಲಿ ಕರೆದುಕೊಂಡು ಹೋಗುವುದರಿಂದಲೂ ತೊಂದರೆ ಆಗುತ್ತೆ. ವಾತಾವರಣ ಬದಲಾವಣೆಯಿಂದ ಕೋಣಗಳಿಗೆ ಹಿಂಸೆಯಾಗುತ್ತೆ ಎಂಬುದು ಪೇಟಾದವರು ಕೋರ್ಟ್​ ಮುಂದಿಟ್ಟಿದ್ದರು. 

 

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಕರಾವಳಿ ಹೊರತುಪಡಿಸಿ ಕಂಬಳ ಆಯೋಜಿಸಬಾರದು ಎಂದರೆ ಅದು ವಿಭಜಕ ಭಾವನೆ ಆಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಹೀಗಾಗಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ ಕಂಬಳ ಆಯೋಜಿಸಲು ಕಾನೂನು ನಿಯಮ ರೂಪಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬಹುದು ಎಂದು ಕೋರ್ಟ್ ಹೇಳಿದೆ.