23 October 2025 | Join group

BREAKING : ಯಕ್ಷಗಾನ ಹಿರಿಯ ಭಾಗವತ, ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ ನಿಧನ

  • 16 Oct 2025 12:10:16 PM

ಮಂಗಳೂರು : ಯಕ್ಷಗಾನ ಹಿರಿಯ ಭಾಗವತ, ಗಾನ ಕೋಗಿಲೆ ದಿನೇಶ್ ಅಮ್ಮಣ್ಣಾಯ (65) ವಿಧಿವಶರಾಗಿದ್ದಾರೆ.

 

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

 

ಇವರು ದಕ್ಷಿಣ ಭಾರತ ಯಕ್ಷಗಾನ ಸಂಪ್ರದಾಯದ ಹಿರಿಯ ಭಾಗವತರಾಗಿದ್ದು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ‘ಕಂಠ ಮಾಧುರ್ಯ’ ತುಳು ಪ್ರಸಂಗಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.