ಬೆಂಗಳೂರು: ಕರ್ನಾಟಕ ಸರ್ಕಾರದ ಜಾತಿ ಆಧಾರಿತ ಜನಗಣತಿಗೆ ಸಂಬಂಧಿಸಿದಂತೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾ ಮೂರ್ತಿ ಅವರು ನೀಡಿರುವ ಪ್ರತಿಕ್ರಿಯೆ ಇದೀಗ ಸುದ್ದಿಯಾಗಿದೆ. ಸರ್ಕಾರದ ಜನಗಣತಿ ತಂಡದಿಂದ ಬಂದ ವಿನಂತಿಯನ್ನು ಅವರು ತಿರಸ್ಕರಿಸಿ, ತಮ್ಮ ಸ್ಪಷ್ಟ ನಿಲುವನ್ನು ಪತ್ರದ ಮೂಲಕ ತಿಳಿಸಿದ್ದರು.
ಈಗ ಅವರ ಅಧಿಕೃತ ಪತ್ರದ ಪ್ರತಿ ದೊರೆತಿದೆ. ಪತ್ರದಲ್ಲಿ ಮೂರ್ತಿ ದಂಪತಿಗಳು ವೈಯಕ್ತಿಕ ಗೌಪ್ಯತೆ ಮತ್ತು ನಾವು ಹಿಂದುಳಿದ ಯಾವ ಜಾತಿಗೂ ಸೇರದೆ ಇರುವುದರಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ ಎಂದು ಉಲ್ಲೇಖಿಸಿದ್ದಾರೆ.
ಜನಗಣತಿ ಕುರಿತಂತೆ ಇತ್ತೀಚೆಗೆ ರಾಜ್ಯದ ಹಲವು ಪ್ರಮುಖ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ನೀಡಿದ್ದರೂ, ಇನ್ಫೋಸಿಸ್ ದಂಪತಿಗಳ ಪತ್ರವು ಜನರಲ್ಲಿ ಕುತೂಹಲ ಮೂಡಿಸಿದೆ.