23 October 2025 | Join group

ಜಿಎಸ್ಟಿ 2.0 ಪ್ರಭಾವ: ನವರಾತ್ರಿಯಲ್ಲಿ ದಾಖಲೆ ಮಟ್ಟದ ಎಲೆಕ್ಟ್ರಾನಿಕ್ಸ್ ಮಾರಾಟ

  • 18 Oct 2025 03:51:34 PM

ದೆಹಲಿ,ಮಂಗಳೂರು: ಈ ವರ್ಷದ ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ದಾಖಲೆ ಮಟ್ಟದ ಮಾರಾಟ ನಡೆದಿದೆ.

 

ಸರಕಾರದ ಮಾಹಿತಿ ಪ್ರಕಾರ ಜಿಎಸ್ಟಿ 2.0 ಪ್ರಭಾವದಿಂದಾಗಿ ಪ್ರಮುಖ ಎಲೆಕ್ಟ್ರಾನಿಕ್ಸ್ ರಿಟೇಲ್ ಚೈನ್ಸ್‌ಗಳಿಂದ ಬಂದ ವರದಿಗಳನ್ನು ವಿಶ್ಲೇಷಿಸಿದ ಬಳಿಕ, ಈ ಬಾರಿ ಮಾರಾಟವು ಕಳೆದ ನವರಾತ್ರಿಗಿಂತ 20ರಿಂದ 25 ಶೇಕಡಾ ಹೆಚ್ಚಾಗಿದೆಎಂದು ಖಚಿತಪಡಿಸಲಾಗಿದೆ.

 

ಹೆಚ್ಚಿನ ಬೇಡಿಕೆ ಕಂಡು ಬಂದ ವಸ್ತುಗಳಲ್ಲಿ 85 ಇಂಚಿನ ಟಿವಿಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳು ಸೇರಿವೆ. ಅನೇಕ ಕುಟುಂಬಗಳು ತಮ್ಮ ಹಳೆಯ ಟಿವಿಗಳನ್ನು ಹೊಸ ಮಾದರಿಗಳಿಗೆ ಅಪ್‌ಗ್ರೇಡ್ಮಾಡಿದ್ದರೆ, ಯುವಕರು ಹೊಸ ತಲೆಮಾರಿನ ಮೊಬೈಲ್‌ಗಳನ್ನು ಖರೀದಿಸಿದ್ದಾರೆ.

 

ಸಂವಹನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವ ಅಶ್ವಿನಿ ವೈಷ್ಣವ್ ಅವರು, “ಈ ಹಬ್ಬದ ಕಾಲದಲ್ಲಿ ಗ್ರಾಹಕರ ಖರೀದಿ ಮನೋಭಾವ ಪುನಶ್ಚೇತನಗೊಂಡಿದೆ. ಭಾರತದ ಆರ್ಥಿಕ ಚಟುವಟಿಕೆಗೆ ಇದು ಒಳ್ಳೆಯ ಸೂಚನೆ” ಎಂದು ತಿಳಿಸಿದ್ದಾರೆ.