23 October 2025 | Join group

ಪುತ್ತೂರಿನಲ್ಲಿ `ಗೋವು’ ಸಾಗಾಟಗಾರರ ಮೇಲೆ ಪೊಲೀಸರಿಂದ ಫೈರಿಂಗ್ : ಓರ್ವ ಅರೋಪಿ ಅರೆಸ್ಟ್

  • 22 Oct 2025 11:52:51 AM

ಮಂಗಳೂರು : ಮಂಗಳೂರಿನಲ್ಲಿ ಗೋವು ಸಾಗಾಟಗಾರರ ಮೇಲೆ ಫೈರಿಂಗ್ ಆಗಿದ್ದು, ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.

 

ಪುತ್ತೂರಿನ ಈಶ್ವರ ಮಂಗಲದ ಬೆಳ್ಳಿಚಡವುನಲ್ಲಿ ಘಟನೆ ನಡೆದಿದೆ. ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದ್ದಾರೆ. ಆದರೆ ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನ. ಬಳಿಕ ಪೊಲೀಸರು ಗೋವು ಸಾಗಾಟಗಾರರ ಮೇಲೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ.

 

ಫೈರಿಂಗ್ ಬಳಿಕ ಖದೀಮರು ಲಾರಿ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಗುಂಡು ಹಾರಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕೇರಳ ಮೂಲದ ಅಬ್ದುಲ್ ಎಂದು ಗುರುತಿಸಲಾಗಿದೆ.