23 October 2025 | Join group

ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ: ಯತೀಂದ್ರ ಸಿದ್ಧರಾಮಯ್ಯ ಹೊಸ ಬಾಂಬ್!

  • 22 Oct 2025 06:29:47 PM

ಚಿಕ್ಕೋಡಿ : ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಎಡೆಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಶಾಸಕರಾದ ಯತೀಂದ್ರ ಸಿದ್ಧರಾಮಯ್ಯ ಬಾಂಬ್ ಸಿಡಿಸಿದ್ದಾರೆ. ಅವರು ಸತೀಶ್ ಜಾರಕಿಹೊಳಿ ಅವರನ್ನು “ಮುಂದಿನ ನಾಯಕತ್ವ ಹೊತ್ತುಕೊಳ್ಳುವ ನಾಯಕ” ಎಂದು ಹೊಗಳಿ ಹೇಳಿದ ಪರಿಣಾಮ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿದೆ.

 

ಚಿಕ್ಕೋಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಯತೀಂದ್ರ ಮಾತನಾಡಿ, “ನಮ್ಮ ತಂದೆ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಹೀಗಾಗಿ ನಮಗೆ ತತ್ವಸಿದ್ಧಾಂತ ಇರುವ, ಸರಳ ಹಾಗೂ ಜನಮೆಚ್ಚಿನ ನಾಯಕರು ಬೇಕು. ಸತೀಶ್ ಜಾರಕಿಹೊಳಿ ಅವರಲ್ಲಿ ಆ ಗುಣಗಳಿವೆ. ಮುಂದೆ ಬರುವ ದೊಡ್ಡ ಜವಾಬ್ದಾರಿ ಹೊರುಲು ತಯಾರಾಗಿರಿ,” ಎಂದರು.

 

ಈ ಹೇಳಿಕೆ ರಾಜ್ಯ ಕಾಂಗ್ರೆಸ್‌ನೊಳಗೆ ಸಿಎಂ ಬದಲಾವಣೆಯ ಚರ್ಚೆಗೆ ಹೊಸ ಇಂಧನ ನೀಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿಬಿರಕ್ಕೂ ದೊಡ್ಡ ಶಾಕ್ ಆಗಿದೆ ಎನ್ನಲಾಗಿದೆ.

 

ಕಾಂಗ್ರೆಸ್ ಮೂಲಗಳ ಪ್ರಕಾರ, ಯತೀಂದ್ರನ ಮಾತು ಸತೀಶ್ ಜಾರಕಿಹೊಳಿಗೆ ಬೆಂಬಲ ಸೂಚನೆಯಂತಿದ್ದು, ರಾಜ್ಯ ಕಾಂಗ್ರೆಸ್ ವಲಯದಲ್ಲಿ ಈಗ ಸತೀಶ್–ಡಿಕೆ–ಸಿದ್ದರಾಮಯ್ಯ ತ್ರಿಕೋನದ ಒಳರಾಜಕೀಯ ಮತ್ತೊಮ್ಮೆ ಬಿರುಸಾದಂತಿದೆ.