23 October 2025 | Join group

ಭಾರತದ ಮೇಲೆ ದಾಳಿ ಮಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದ ಪಾಕಿಸ್ತಾನ!

  • 23 Oct 2025 01:07:54 PM

ದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿಯಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಂಡಿದೆ.

 

ಭಯೋತ್ಪಾದಕರಿಗೆ ಸ್ವಾತಂತ್ರ್ಯ ಹೋರಾಟಗಾರ ಟ್ಯಾಗ್ ನೀಡಿದೆ. ಈ ಬೆನ್ನಲ್ಲೇ ಭಾರತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ತೀವ್ರವಾಗಿ ಖಂಡಿಸಿದ್ದು, ಗಡಿಯಾಚೆಗಿನ ಭಯೋತ್ಪಾದನೆಯನ್ನು "ಸ್ವಾತಂತ್ರ್ಯ ಹೋರಾಟ" ಎಂದು ಬಿಂಬಿಸಿ ಸಮರ್ಥಿಸುವ ಪಾಕಿಸ್ತಾನದ ಪ್ರಯತ್ನವನ್ನು ತಿರಸ್ಕರಿಸಿದೆ.

 

ಈ ಹೇಳಿಕೆಗೆ ಭಾರತದ ಮೊದಲ ಕಾರ್ಯದರ್ಶಿ ರಘು ಪುರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. "ಭಯೋತ್ಪಾದನೆಯು ಮಾನವೀಯತೆಯ ಮೂಲ ತತ್ವಗಳನ್ನು ಒಡ್ಡುವ ಗಂಭೀರ ಅಪರಾಧ. ಇದು ಧರ್ಮಾಂಧತೆ, ಹಿಂಸೆ, ಮತ್ತು ಭಯದ ಕೆಟ್ಟ ರೂಪವನ್ನು ಪ್ರತಿನಿಧಿಸುತ್ತದೆ. ಭಯೋತ್ಪಾದಕರು ಮಾನವಕುಲದ ಕೆಟ್ಟ ಶತ್ರುಗಳು" ಎಂದು ಗುಡುಗಿದರು. ಪಾಕಿಸ್ತಾನದ ವಾದವನ್ನು ತಿರಸ್ಕರಿಸಿ, ಇದು ಅವರ "ದ್ವಿಭಾಷೆ ಮತ್ತು ಬೂಟಾಟಿಕೆ"ಯನ್ನು ಬಯಲುಗೊಳಿಸುತ್ತದೆ ಎಂದರು.