ಬೆಂಗಳೂರು: ನಗರದ ಬಯೋಕಾನ್ ಪಾರ್ಕ್(Biocon Park) ನಲ್ಲಿರುವ ದೇಶದ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾದ ಬಯೋಕಾನ್ ಸಂಸ್ಥೆಯ ಮಾಲಕರಾದ ಕಿರಣ್ ಮಜುಂದಾರ್-ಶಾ ಇದೀಗ ವಿಶ್ವದ ಮೂರನೇ ಅತೀ ಶ್ರೀಮಂತ ಉದ್ಯೋಗಪತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೋರ್ಬ್ಸ್‌ನ 2025 ರ ಪಟ್ಟಿಯ ಪ್ರಕಾರ, ಕಿರಣ್ ಮಜುಂದಾರ್-ಶಾ ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕವಾಗಿ ಅತ್ಯಂತ ಶ್ರೀಮಂತ ಸ್ವ-ನಿರ್ಮಿತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಬಯೋಕಾನ್ ನಿವ್ವಳ ಮೌಲ್ಯ 3.6 ಬಿಲಿಯನ್ ಡಾಲರ್ ಆಗಿದ್ದು, ಕಿರಣ್ ಮಜುಂದಾರ್-ಶಾ ಒಟ್ಟಾರೆಯಾಗಿ ಅರೋಗ್ಯ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ಸ್ವ-ನಿರ್ಮಿತ ಮಹಿಳೆಯರಲ್ಲಿ ಮತ್ತು ಭಾರತದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು.
ಹಲವಾರು ದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಬಯೋಕಾನ್ ಕಂಪನಿ, ಅನೇಕ ಯುವ ಆಕಾಂಕ್ಷಿಗಳಿಗೆ ಉದ್ಯೋಗವನ್ನು ನೀಡಿದೆ. ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡಿ, ನಂತರದ ದಿನಗಳಲ್ಲಿ ಸ್ವಂತ ಕಂಪನಿ ನಿರ್ಮಿಸಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದ ಕಿರಣ್ ಮಜುಂದಾರ್-ಶಾ ಅವರನ್ನು ರಾಜ್ಯದ ಮುಖ್ಯಮಂತ್ರಿ ಸಮೇತ ಹಲವಾರು ಗಣ್ಯರು ಭೇಟಿಯಾಗಿ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.