24 October 2025 | Join group

ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೆ ಚಾಕು ಇರಿದ ರೌಡಿಶೀಟರ್

  • 24 Oct 2025 11:09:22 AM

ಮಂಗಳೂರು : ಮಂಗಳೂರಿನ ಸುರತ್ಕಲ್ ಹತ್ತಿರದ ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ. ಸುರತ್ಕಲ್ ನ ದೀಪಕ್ ಬಾರ್ ನಲ್ಲಿ ನಿನ್ನೆ ಈ ಒಂದು ಘಟನೆ ನಡೆದಿದ್ದು, ಬಾರ್ ನಲ್ಲಿ ಮದ್ಯ ಸೇವಿಸಿ ಹೊರಬರುವಾಗ ಗಲಾಟೆ ನಡೆದಿದೆ.

 

ಮುಕ್ಷಿದ್ ಹಾಗು ನಿಜಾಮ್ ಎಂಬುವವರಿಗೆ ಚಾಕು ಇರಿಯಲಾಗಿದೆ. ರೌಡಿಶೀಟರ್ ಆದಂತಹ ಗುರುರಾಜ್ ಮತ್ತು ಅಲೆಕ್ಸ್ ಸಂತೋಷ್, ಸುಶಾಂತ್ ಹಾಗೂ ನಿತಿನ್ ಎಂಬುವವರು ಇಬ್ಬರಿಗೆ ಚಾಕು ಇರಿದು ದೃಷ್ಕೃತ್ಯ ಎಸಗಿದ್ದಾರೆ. ಘಟನೆ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರ್ ಆರೋಪಿಗಳ ಬಂಧನಕ್ಕೆ ನಾಲ್ಕು ತಂಡ ರಚನೆ ಮಾಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.