28 October 2025 | Join group

ಸುಪ್ರೀಂ ಕೋರ್ಟ್ ನ ಮುಂದಿನ ಸಿಜೆಐ ಆಗಿ ನ್ಯಾ.ಸೂರ್ಯಕಾಂತ್ ನೇಮಕಕ್ಕೆ ಬಿ.ಆರ್.ಗವಾಯಿ ಶಿಫಾರಸು

  • 27 Oct 2025 01:32:11 PM

ನವದೆಹಲಿ: ಸುಪ್ರೀಂ ಕೋರ್ಟ್ ನ ಹಿರುಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಮುಂದಿನ ಸಿಜೆಐ ಆಗಿ ನೇಮಕ ಮಾಡಲು ಸಿಜೆಐ ಬಿ.ಆರ್.ಗವಾಯಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದಾರೆ.

 

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು 2025ರ ಮೇ 14ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಿದ್ದರು. ನವೆಂಬರ್ 23ರಕ್ಕೆ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ.

 

ಈ ಹಿನ್ನೆಲೆಯಲ್ಲಿ ಬಿ.ಆರ್.ಗವಾಯಿ ಬಳಿಕ ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್ ಅವರನ್ನು ನೇಮಕ ಮಾಡಲು ಶಿಫಾರಸು ಮಾಡಲಾಗಿದೆ. ನವೆಂಬರ್ 24ರಂದು ನ್ಯಾ.ಸೂರ್ಯಕಾಂತ್ ಸುಪ್ರೀಂ ಕೋರ್ಟ್ ನ 53ನೇ ಸಿಜೆಐ ಆಗಿ ಆಯ್ಕೆಯಾಗಲಿದ್ದಾರೆ.