ಉಪ್ಪಿನಂಗಡಿ: ಹಾಡಹಗಲೇ ಅಂಗಡಿಯೊಂದರಿಂದ ಲಕ್ಷಾಂತರ ರೂ ನಗದು ಕಳವುಗೈದ ಘಟನೆ ಇಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನದ ವೇಳೆ ಈ ಕಳವು ಕೃತ್ಯ ನಡೆದಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಕಳ್ಳತನ ನಡೆದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಇದ್ದರೂ ಅದರ ರೀಚಾರ್ಜ್ ಮಾಡಿಸದೆ ಬಿಟ್ಟಿದ್ದರು. ಇನ್ನೂ ಆಶ್ಚರ್ಯವೆಂದರೆ, ಕಳ್ಳತನದ ವೇಳೆ ಅಂಗಡಿಯ ಬಾಗಿಲೇ ಹಾಕಿರಲಿಲ್ಲ, ಹಾಗೂ ಕ್ಯಾಮರಾವನ್ನೂ ಆಫ್ ಮಾಡಿದ್ದರು ಎನ್ನಲಾಗಿದೆ.
ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುವ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮರ ಅಳವಡಿಸಿರಲಿಲ್ಲ. ಪರವಾನಿಗೆ ನೀಡುವಾಗ ಪಂಚಾಯತ್, ಕಂದಾಯ, ಅಗ್ನಿಶಾಮಕ ಸೇರಿದಂತೆ ಸಂಬಂಧಿತ ಇಲಾಖೆಗಳು ಸ್ಥಳ ಪರಿಶೀಲನೆ ಮಾಡಿ, ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಿದರೆ ಇಂತಹ ಕಳ್ಳತನಗಳನ್ನು ತಪ್ಪಿಸಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಧಿಕಾರಿಯವರಿಗೂ ಈ ಕುರಿತು ಮಾಹಿತಿ ನೀಡಲು ಸಾರ್ವಜನಿಕರು ಮನವಿ ಮಾಡಿದ್ದಾರೆ.





