30 October 2025 | Join group

ಅಕ್ರಮ ಕೂಟ ಸೇರಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ತಾಯಿ ವಿರುದ್ಧ FIR ದಾಖಲು

  • 29 Oct 2025 05:01:33 PM

ದಕ್ಷಿಣಕನ್ನಡ : ಅಕ್ರಮ ಕೂಟ ಸೇರಿದ ಆರೋಪದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ ತಿಮರೋಡಿ ಸಹೋದರ ಮೋಹನ್ ಶೆಟ್ಟಿ, ಪ್ರಸನ್ನ ರವಿ ಸೇರಿದಂತೆ 12 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

 

ಸಾಮಾಜಿಕ ಜಾಲತಾಣಗಳಲ್ಲಿ ತಿಮರೋಡಿ ಗಡಿಪಾರು ವಿರುದ್ಧ ಪ್ರತಿಭಟನೆ ಅಂತಾ ಕರೆ ನೀಡಲಾಗಿತ್ತು. ಪೊಲೀಸರಿಂದ ಅನುಮತಿ ಸಿಗದೇ ಇದ್ದರೂ ಜನ ಸೇರುವಂತೆ ಕರೆ ಕೊಡಲಾಗಿತ್ತು. ಇದರಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.