01 February 2026 | Join group

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಕೋಟಿಗಟ್ಟಲೆ ವಂಚನೆ: ದಂಪತಿಗಳು ಬಂಧನ

  • 30 Oct 2025 09:24:31 AM

ಮಂಗಳೂರು : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಎಸಗಿದ ದಂಪತಿಗಳನ್ನ ಪೊಲೀಸರು ಬಂಧಿಸಿದ್ದಾರೆ.

 

ಬಂಧಿತರನ್ನು ಕುಂದಾಪುರ ತಾಲೂಕಿನ ಗಂಗೊಳ್ಳಿ ಚರ್ಚ್ ರೋಡ್ ನಿವಾಸಿ ಆಲ್ಬನ್ ರೆಬೋರೋ (42) ಹಾಗೂ ಬೆಂಗಳೂರು ಅನೇಕಲ್ ತಾಕೂಕಿನ ವೀವರ್ಸ್ ಕಾಲೊನಿ ನಿವಾಸಿ ಪ್ರಕೃತಿ ಯು. (34) ಎಂದು ಗುರುತಿಸಲಾಗಿದೆ.

 

ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಪ್ರತಿ ವ್ಯಕ್ತಿಯಿಂದ 3 ರಿಂದ 4 ಲಕ್ಷ ರೂ ಹಣ ಪಡೆಯುತ್ತಿದ್ದರು. ಕಾವೂರು ಠಾಣೆಯಲ್ಲಿ 30 ಕ್ಕೂ ಹೆಚ್ಚು ಮಂದಿ ಇವರ ವಿರುದ್ಧ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ.

 

ಯುರೋಪ್ ರಾಷ್ಟ್ರಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಾಂತರ ರೂ ಹಣ ವಸೂಲಿ ಮಾಡಿದ್ದರು. ನಂತರ ಅವರ ಸಂಪರ್ಕಕ್ಕೆ ಬಾರದೇ ವಂಚನೆ ಎಸಗುತ್ತಿದ್ದರು.