01 February 2026 | Join group

ಉಳ್ಳಾಲ : ಖಾಸಗಿ ಬಸ್ ಢಿಕ್ಕಿ - ಸ್ಕೂಟರ್ ಸವಾರ ಮೃತ್ಯು

  • 31 Oct 2025 02:49:13 PM

ಉಳ್ಳಾಲ: ಸ್ಕೂಟರ್ ಗೆ ಖಾಸಗಿ ಬಸ್ಸು ಢಿಕ್ಕಿ ಹೊಡೆದ ಪರಿಣಾಮ‌ ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ರಾ.ಹೆ.66 ರ ಉಳ್ಳಾಲದ ಅಡಂ ಕುದ್ರು ಎಂಬಲ್ಲಿ ನಡೆದಿದೆ. ಮೃತರನ್ನು ಬೊಕ್ಕಪಟ್ಣ ಬೆಂಗ್ರೆ ನಿವಾಸಿ ನಾಗೇಶ್ ಪುತ್ರನ್(62) ಎಂದು ಗುರುತಿಸಲಾಗಿದೆ.

 

ಅಡಂಕುದ್ರು ಎಂಬಲ್ಲಿ ನಾಗೇಶ್ ಅವರ ಸ್ಕೂಟರ್ ಗೆ ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ನಾಗೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ