03 November 2025 | Join group

ತೆಲಂಗಾಣ ಸಾರಿಗೆ ಬಸ್ ಮೇಲೆ ಮಗುಚಿ ಬಿದ್ದ ಟಿಪ್ಪರ್: 17 ಜನ ಸಾವು

  • 03 Nov 2025 09:52:01 AM

ಹೈದರಾಬಾದ್:  ಇಂದು ಬೆಳಗ್ಗಿನ ಜಾವಾ ಸರ್ಕಾರಿ ಬಸ್ ಮೇಲೆ ಟಿಪ್ಪರ್ ಮಗಚಿ ಬಿದ್ದು 17 ಜನ ತಮ್ಮ ಪ್ರಾಣ ಕಳೆದುಕೊಂಡಿರುವ ಭೀಕರ ಘಟನೆ ತೆಲಂಗಾಣ ರಂಗಾರೆಡ್ಡಿ ಜಿಲ್ಲೆಯ ಚೇಬಳ್ಳ ತಾಲೂಕಿನ ಮಿರ್ಜಾಗೂಡ ಬಳಿ ನಡೆದಿದೆ.

 

ಬಸ್ ಮೇಲೆ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್ ಮಗುಚಿಬಿದ್ದ ಪರಿಣಾಮ ಅವಘಡ ನಡೆದಿದೆ. ತೆಲಂಗಾಣದ ಸರ್ಕಾರಿ ಬಸ್ ನಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಸದ್ಯಕ್ಕೆ 17 ಜನ ಸಾವ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

 

ಟಿಪ್ಪರ್ ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣವಾಗಿದೆ. ಬಸ್ ಮೇಲೆ ಟಿಪ್ಪರ್ ಮಗುಚಿದ್ದರಿಂದ ಬಸ್ ನಲ್ಲಿ ಜಲ್ಲಿಕಲ್ಲುಗಳು ತುಂಬಿಕೊಂಡಿವೆ. ಗಾಯಗೊಂಡ ಹಲವರ ಸ್ಥಿತಿ ಚಿಂತಾಜನಕವಾಗಿದೆ.