ಬೆಂಗಳೂರು: ನಗರದಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಸಹಕಾರದಿಂದ ಈ ವರ್ತನೆ ಕಡಿಮೆಯಾಗಿಸುವ ನಿರ್ಧಾರವಾಗಿದೆ.
‘ನೋಡು, ದಾಖಲಿಸು, ಶೇರ್ ಮಾಡು’ ಎಂದು ಮನವಿ ಮಾಡುತ್ತಿದ್ದೇವೆ” ಎಂಬ ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಬೆಂಗಳೂರಿನ ಕಸದ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಬೆಂಗಳೂರು ಕಾಪರೇಷನ್ ನಿರ್ಧರಿಸಿದೆ.
ವಿಡಿಯೋವನ್ನು WhatsApp ಮೂಲಕ ಅಥವಾ ವಿಶೇಷ ಅಪ್ಲಿಕೇಶನ್ ಮೂಲಕ ಸಲ್ಲಿಸಿದವರಿಗೆ ₹ 250 ಬಹುಮಾನ ನೀಡಲಾಗುತ್ತದೆ. ಈ ಯೋಜನೆಯಿಂದ ಯುವಕರು ಕ್ಯಾಮೆರಾ ಹಿಡಿದುಕೊಂಡು ರಸ್ತೆ ಮತ್ತು ನಗರವಾಸಿಗಳ ಮನೆಯ ಮುಂದೆ ನಿಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಸಾಮಾಜಿಕ ತಾಣಗಳಲ್ಲಿ ಬರೆದಿದ್ದಾರೆ.





