ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಪದವುಯಲ್ಲಿ ಭಾನುವಾರ ಸಂಜೆ ಸಂಭವಿಸಿದ ಏಸಿ ಸ್ಫೋಟದಿಂದ ಮನೆಗೆ ಭಾರೀ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ, ಆದರೆ ಮನೆಯೊಳಗಿನ ಪೀಠೋಪಕರಣಗಳು, ಬಟ್ಟೆಗಳು, ನಗದು ಮತ್ತು ಪ್ರಮುಖ ದಾಖಲೆಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ.
ಮನೆಯ ಮಾಲೀಕ ಫೈಜಲ್ ಅವರು ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ. ನೆರೆಹೊರೆಯವರು ಹೊಗೆ ಕಾಣುತ್ತಿದ್ದಂತೆಯೇ ಬಾಗಿಲು ಮುರಿದು ಬೆಂಕಿ ನಿಯಂತ್ರಣಕ್ಕೆ ಮುಂದಾದರು.
ಕೆಲವೇ ದಿನಗಳ ಹಿಂದೆ ಅಳವಡಿಸಿದ ಹವಾನಿಯಂತ್ರಣ (AC) ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹರಡಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಎಸಿ ಬಳಸುವವರು ಜಾಗ್ರತೆ ವಹಿಸಿಬೇಕೆಂದು ಈ ಘಟನೆಯಿಂದ ತಿಳಿದು ಬಂದಿದೆ.





