31 January 2026 | Join group

ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ

  • 07 May 2025 08:11:30 PM

ಮುಂಬಯಿ, ಮೇ 07: ಭಾರತ ತಂಡದ ನಾಯಕ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. ರೋಹಿತ್ ಅವರನ್ನು ಟೆಸ್ಟ್ ನಾಯಕತ್ವದಿಂದ ವಜಾಗೊಳಿಸಲಾಗಿದೆ ಎಂಬ ವರದಿಗಳು ವೈರಲ್ ಆದ ಕೆಲವೇ ನಿಮಿಷಗಳ ನಂತರ ತನ್ನ ಟೆಸ್ಟ್ ಕ್ರಿಕೆಟಿಗೆ ರಾಜೀನಾಮೆ ನೀಡಿದ್ದಾರೆ.

 

38 ವರ್ಷ ಪ್ರಾಯದ ರೋಹಿತ್ ಶರ್ಮ ಭಾರತದ ಪರ ಅತ್ಯಂತ ಫಲಪ್ರದ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದರು. ಆಟವಾಡಿದ ಒಟ್ಟು 67 ಟೆಸ್ಟ್ ಮ್ಯಾಚ್ ಗಳಲ್ಲಿ 4301 ರನ್ ಕಲೆಹಾಕಿದ್ದಾರೆ. ಒಟ್ಟು 40.57 ಸರಾಸರಿಯಲ್ಲಿ 12 ಶತಕಗಳು ಮತ್ತು 18 ಅರ್ಧಶತಕಗಳ ಸಾಧನೆ ಮಾಡಿದ್ದಾರೆ.

 

38 ವರ್ಷದ ರೋಹಿತ್ ಶರ್ಮ ಮುಂಬಯಿ ಇಂಡಿಯನ್ಸ್ ತಂಡದಲ್ಲಿ ಆಟವಾಡುತ್ತಿರುವ ಇವರು ಏಕದಿನ ಮತ್ತು ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಆಡಲಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ತಕ್ಷಣದಿಂದ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್‌ನಿಂದ ಇಂದು ಮೇ 07, 2025 ರಂದು ನಿವೃತ್ತಿ ಘೋಷಿಸಿದರು.