IPL 2025, ಮೇ 16: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ನ್(KKR) ನಡುವೆ ನಾಳೆ ನಡೆಯುವ ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಬಹಳ ವ್ಯವಸ್ಥಿತವಾಗಿ ನಡೆಯುತ್ತಿದ್ದ ಐಪಿಎಲ್ ಇದ್ದಕ್ಕಿದ್ದಂತೆ ನಿಂತುಹೋದ ಕಾರಣ ಐಪಿಎಲ್ ಪ್ರಿಯರಿಗೆ ನಿರಾಸೆ ತಂದಿತು.
ಪಾಕಿಸ್ತಾನದ ವಿರುದ್ಧ ಭಾರತ 'ಆಪರೇಷನ್ ಸಿಂಧೂರ್' ಮಾಡಿದ ನಂತರ ಮೇ 8 ರಂದು ಭಾರತ ಮತ್ತು ಪಾಕಿಸ್ತಾನದ ನಡುವಣ ಗಡಿಪರಿಸ್ಥಿತಿಗಳಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ನಾಳೆ, ಮೇ 17, 2025 ರಂದು ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಈ ಎರಡು ತಂಡಗಳ ನಡುವೆ ನಡೆಯಲಿದೆ.
ನಾಳೆ ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಐಪಿಎಲ್ ಪಂದ್ಯಕ್ಕೆ ಹವಾಮಾನವು ಪ್ರಮುಖ ಪಾತ್ರ ವಹಿಸಬಹುದು. ಹವಾಮಾನ ವರದಿ ಪ್ರಕಾರ, ಮೇ 17 ರಂದು ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಸಂಜೆ ವೇಳೆಗೆ ಮೋಡಗಳು, ಮಳೆಯ ಚಟುವಟಿಕೆಗಳು ಮತ್ತು ಗಾಳಿಯು ಹೆಚ್ಚಾಗುವ ಸಾಧ್ಯತೆಗಳಿವೆ.
ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿರುವುದರಿಂದ, ಗುರುವಾರ ಕೂಡ ಜಡಿಮಳೆಯಾಗಿದೆ. RCB ತಂಡದ ಆಟಗಾರ ಗ್ರೌಂಡ್ ಒಳಗಡೆ ಸ್ವಿಮ್ಮಿಂಗ್ ಮಾಡಿದ ವಿಡಿಯೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಮತ್ತು ಅದು ಸಕತ್ ವೈರಲ್ ಕೂಡ ಆಗಿದೆ.
https://www.instagram.com/reel/DJsoyAqh1zf/?igsh=azQ1Zmx0emlhemgz
ಹೀಗಾಗಿ, ನಾಳೆಯ ಪಂದ್ಯವು ಹವಾಮಾನದ ಪರಿಣಾಮವಾಗಿ ಪ್ರಭಾವಿತವಾಗಬಹುದು. ಹೆಚ್ಚು ಮಳೆಯಾದರೆ, ಡಕ್‌ವರ್ಥ್-ಲೂಯಿಸ್ ನಿಯಮದಡಿ ಪಂದ್ಯದ ಸಮಯ ಕಡಿತಗೊಳ್ಳಬಹುದು ಅಥವಾ ರದ್ದುಪಡಿಸಬಹುದು. ಒಂದು ವೇಳೆ ಪಂದ್ಯ ರದ್ದಾದರೆ RCB ಅಬಿಮಾನಿಗಳಿಗೆ ತುಂಬಾ ನಿರಾಸೆಯಾಗಲಿದೆ. ಸದ್ಯಕ್ಕೆ RCB 11 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. KKR 12 ಪಂದ್ಯಗಳನ್ನು ಆಡಿ 11 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ.