20 June 2025 | Join group

ಜಾವೆಲಿನ್‌ನಲ್ಲಿ 90 ಮೀಟರ್ ದಾಟಿದ ನೀರಜ್ ಚೋಪ್ರಾ : ಭಾರತವು ಸಂತೋಷ ಮತ್ತು ಹೆಮ್ಮೆಪಡುತ್ತದೆ ಎಂದ ಮೋದಿ

  • 17 May 2025 12:08:44 PM

Neeraj Chopra : ಭಾರತದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ(Neeraj Chopra) ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದಾರೆ. ದೋಹಾದಲ್ಲಿ(Doha) ನಡೆದ ಡೈಮಂಡ್ ಲೀಗ್ 2025(Diamond League 2025) ರ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ 90.23 ಮೀಟರ್ ದೂರ ಎಸೆಯುವ ಮೂಲಕ 90 ಮೀಟರ್ ಗಡಿ ದಾಟಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.

 

ನೀರಜ್ ಚೋಪ್ರಾ ಜ್ಯೂಲಿಯರ್ ವೆಬರ್ 91.06 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರೆ, ಭಾರತದ ನೀರಜ್ ಚೋಪ್ರಾ 90.23 ಮೀಟರ್ ದೂರ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ನೀರಜ್ ಚೋಪ್ರಾ ಜಾವೆಲಿನ್ ಎಸೆತ 2 ಬಾರಿ ಒಲಿಂಪಿಕ್ ಪದಕ ಪಡೆದ ಭಾರತೀಯ ಅತಿ ಗೌರವಯುತ ಕ್ರೀಡಾಪಟುವಾಗಿದ್ದರೆ.

 

ಈ ಸಾಧನೆಯು ಚೋಪ್ರಾ ರವರ ಹಿಂದಿನ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮೀರಿಸಿದೆ. ಈ ಹಿಂದೆ 2022 ರಲ್ಲಿ ಸ್ಟಾಕ್‌ಹೋಮ್ ಡೈಮಂಡ್ ಲೀಗ್(Stockholm Diamond League) ನಲ್ಲಿ ಇವರು 89.94 ಮೀಟರ್ ದೂರ ಎಸೆದಿದ್ದರು. ನಿನ್ನೆಯ ಪಂದ್ಯದಲ್ಲಿ ಕಿಕ್ಕಿರಿದ ಜನಸಮೂಹ ಮತ್ತು ವಿಶ್ವ ದರ್ಜೆಯ ಎಸೆತಗಾರರನ್ನು ಒಳಗೊಂಡ ಸ್ಪರ್ಧಾತ್ಮಕ ಮೈದಾನದ ಮುಂದೆ ಚೋಪ್ರಾ ಅತ್ಯಂತ ತನ್ನ ರೋಮಾಂಚನಕಾರಿ ಪ್ರದರ್ಶನ ನೀಡಿದರು.

 

ನೀರಜ್ ಸಾಧನೆಗೆ ಭಾರತದ ಪ್ರಧಾನಿ ಮೋದಿ "ಅದ್ಭುತ ಸಾಧನೆ! ದೋಹಾ ಡೈಮಂಡ್ ಲೀಗ್ 2025 ರಲ್ಲಿ 90 ಮೀಟರ್ ಗಡಿ ದಾಟಿದ್ದಕ್ಕಾಗಿ ಮತ್ತು ತಮ್ಮ ವೈಯಕ್ತಿಕ ಅತ್ಯುತ್ತಮ ಎಸೆತವನ್ನು ಸಾಧಿಸಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ಅವಿರತ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ಭಾರತವು ಸಂತೋಷ ಮತ್ತು ಹೆಮ್ಮೆಪಡುತ್ತದೆ".