19 June 2025 | Join group

ಅಬ್ಬರಿಸಿದ ಜಿತೇಶ್ ಶರ್ಮಾ : ರೋಚಕ ಪಂದ್ಯದಲ್ಲಿ ಲಕ್ನೋ ವಿರುದ್ಧ ಬೆಂಗಳೂರಿಗೆ ಭರ್ಜರಿ ಜಯ : ಕ್ವಾರ್ಟರ್ ಫೈನಲ್ ಗೆ ಲಗ್ಗೆ

  • 28 May 2025 01:51:20 AM

IPL 2025 : ನಿನ್ನೆ ಮೇ 28, 2025ರಂದು, ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಿದ್ದು, ಆರ್‌ಸಿಬಿ 6 ವಿಕೆಟ್‌ಗಳಿಂದ ಜಯ ಸಾಧಿಸಿತು. ಈ ಗೆಲುವು ಆರ್‌ಸಿಬಿಗೆ ಪ್ಲೇಆಫ್‌ಗಳ ಮೊದಲ ಕ್ವಾಲಿಫೈಯರ್‌ನಲ್ಲಿ ಪ್ರವೇಶಿಸಲು ದಾರಿ ತೆರೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಅಂಕಗಳೊಂದಿಗೆ ಎರಡನೇ ಐಪಿಎಲ್ 2025 ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

 

ಆರ್‌ಸಿಬಿ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿತು. ಲಕ್ನೋ ತಂಡವು ಉತ್ತಮ ಆರಂಭವನ್ನು ನೀಡಿ 227 ರನ್ ನ ಬ್ರಹತ್ ಮೊತ್ತವನ್ನು ಕೂಡಿಹಾಕಿತ್ತು. ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ ಉತ್ತಮ ಪ್ರದರ್ಶ ನೀಡಿ 18.4 ಓವರ್ ಗಳಲ್ಲಿ 4 ವಿಕೆಟ್‌ಗಳನ್ನು ಕಳೆದು ಗುರಿಯನ್ನು ಸಾಧಿಸಿತು.

 

ಆರ್‌ಸಿಬಿ ತಂಡದ ಸ್ಟ್ಯಾಂಡ್-ಇನ್ ಕ್ಯಾಪ್ಟನ್ ಆಗಿದ್ದ ಜಿತೇಶ್ ಶರ್ಮಾ 85 ರನ್‌ಗಳನ್ನು ಬಾರಿಸಿದ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಲಕ್ನೋ ತಂಡದ ನಾಯಕ ರಿಷಭ್ ಪಂತ್, 118 ರನ್‌ಗಳನ್ನು ಬಾರಿಸಿ ತಂಡವನ್ನು ಉತ್ತಮ ಸ್ಥಿತಿಗೆ ತಲುಪಿಸಿದರು, ಆದರೆ ಅವರ ಪ್ರಯತ್ನಗಳು ತಂಡಕ್ಕೆ ಜಯ ತರುವುದಕ್ಕೆ ಸಾಕಾಗಲಿಲ್ಲ.

 

ಇದನ್ನೂ ಓದಿಹಿರಿಯ ನಟ ಅನಂತ್ ನಾಗ್ ರವರಿಗೆ ಪದ್ಮಭೂಷಣ ಪ್ರಶಸ್ತಿಯಿಂದ ಸಮ್ಮಾನ : ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ

 

ಆರ್‌ಸಿಬಿ ತಂಡದ ಸಾಧನೆ

ಈ ಗೆಲುವು ಆರ್‌ಸಿಬಿಗೆ ಪ್ಲೇಆಫ್‌ಗಳ ಮೊದಲ ಕ್ವಾಲಿಫೈಯರ್‌ನಲ್ಲಿ ಪ್ರವೇಶಿಸಲು ಅವಕಾಶ ನೀಡಿದೆ. ಆರ್‌ಸಿಬಿ ತಂಡವು ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಮ್ಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.

 

ಈ ಪಂದ್ಯವು ಆರ್‌ಸಿಬಿ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದ್ದು, ತಂಡವು ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧವಾಗಿದೆ.