IPL: 2025ರ ಐಪಿಎಲ್ ಕ್ವಾಲಿಫಿಯರ್ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ವಿರುದ್ಧ ಏಕಪಕ್ಷಿ ಗೆಲುವು ಸಾಧಿಸಿದೆ ಮತ್ತು ಈ ಸೀಸನ್ ನ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಇದು ಆರ್ಸಿಬಿಗೆ ಐಪಿಎಲ್ ನಲ್ಲಿ ನಾಲ್ಕನೇ ಫೈನಲ್ ಪ್ರವೇಶವಾಗಿದೆ.
ನಾಳೆ ಎರಡನೇ ಕ್ವಾಲಿಫಿಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಮುಂಬಯಿ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಇಂದು ಸೋತ ಪಂಜಾಬ್ ಎಲಿಮಿನೇಟರ್ ನಲ್ಲಿ ಗೆದ್ದ ತಂಡವನ್ನು ಕ್ವಾಲಿಫೈಯರ್ ಎರಡರಲ್ಲಿ ಎದುರಿಸಲಿದೆ. ಕ್ವಾಲಿಫೈಯರ್ ಎರಡರಲ್ಲಿ ಗೆಲ್ಲಲಿರುವ ತಂಡ ಬರುವ ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಎದುರಿಸಲಿದೆ.
ಪಂಜಾಬ್ ವಿರುದ್ಧದ ಕ್ವಾಲಿಫಿಯರ್ ಒಂದರ ಪಂದ್ಯದಲ್ಲಿ ಇಂದು ಆರ್ಸಿಬಿ ಎಂಟು ವಿಕೆಟುಗಳ ಅಂತರದಿಂದ ಸುಲಭವಾಗಿ ಜಯಗಳಿಸಿದೆ. ಐಪಿಎಲ್ 2025 ಪ್ರವೇಶಿಸಿದೆ ಆರ್ಸಿಬಿ ಬೌಲರ್ ಗಳ ದಾಳಿಗೆ ಪಂಜಾಬ್ 101 ರನ್ನಿಗಳಿಗೆ ಆಲ್ ಔಟ್ ಆಗಿತ್ತು. ಸುಲಭ ರನ್ನುಗಳ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಫಿಲ್ ಸಾಲ್ಟ್ ವೇಗದ ಅರ್ಧ ಶತಕ ನೆರವಿನಿಂದ ಸುಲಭ ಜಯ ಸಾಧಿಸಿತು.
ಟಾಸ್ ಜಯಿಸಿ ಮೊದಲು ಬೌಲಿಂಗ್ ಮಾಡಿದ ಆರ್ಸಿಬಿ ತಂಡ, ಹ್ಯಾಜಲ್ವುಡ್ ಮತ್ತು ಸುಯಾಶ್ ಶರ್ಮ ರವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪಂಜಾಬ್ ತಂಡವನ್ನು 101ರನ್ನ ರನ್ನಿಗೆ ಆಲ್ ಔಟ್ ಮಾಡಿದೆ. ಈ ಇಬ್ಬರು ಬೌಲರ್ ಗಳು ತಲ ಮೂರು ವಿಕೆಟ್ ಪಡೆದರು. ನಂತರ ಆರ್ಸಿಬಿ ಉತ್ತಮ ಆರಂಭದೊಂದಿಗೆ ಎರಡು ವಿಕೆಟ್ ನಷ್ಟಕ್ಕೆ 10 ಓವರ್ ಗಳಲ್ಲಿ ಜಯ ಸಾಧಿಸಿತು. ಫಿಲ್ ಸಾಲ್ಟ್ ಅವರು ಕೇವಲ 26 ಬೌಲ್ ಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಮೂಲಕ 56 ರನ್ನು ಗಳಿಸಿದರು.
ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿರುವ ಆರ್ಸಿಬಿ 2025ರ ಐಪಿಎಲ್ ಕಪ್ ಎತ್ತಲಿದೆಯೇ? ಈ ಪ್ರಶ್ನೆಗೆ ಮುಂದಿನ ಮಂಗಳವಾರ ಉತ್ತರ ದೊರೆಯಲಿದೆ. ಆರ್ಸಿಬಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ