PKL 2025: ಪ್ರೊ ಕಬ್ಬಡಿ ಲೀಗ್ ನ 12ನೇ ಸೀಸನ್ ನ ಹರಾಜಿನ ಮೊದಲ ದಿನವೇ ಇತಿಹಾಸ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ 10 ಆಟಗಾರರು ರೂ.1 ಕೋಟಿಗಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗಿದ್ದರೆ.
ಜೂನ್ 1 ರಂದು ಮುಂಬಯಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 500ಕ್ಕೂ ಹೆಚ್ಚು ಕಬಡ್ಡಿ ಆಟಗಾರರು ಪಾಲ್ಗೊಂಡಿದ್ದರು. ಕಳೆದ 2024 ರ PKL ಹರಾಜಿನಲ್ಲಿ 8 ಜನ ಕೋಟಿ ಗಡಿ ದಾಟಿದ್ದು, 2025 ರ PKL ನಲ್ಲಿ 10 ಆಟಗಾರರು ಕೋಟಿಗೆ ಹರಾಜಾಗಿದ್ದು ಸದ್ಯದ ಮಟ್ಟಿಗೆ ಇತಿಹಾಸ ರಚನೆಯಾಗಿದೆ.
ಮಹ್ಮದರೇಜಾ ಶಾಡ್ಲೋಯಿ ಗುಜರಾತ್ ಜೈಂಟ್ಸ್ ರೂ. 2.23 ಕೋಟಿ ಮಾರಾಟವಾಗಿದ್ದರೆ. ಇದು ಈ ವರ್ಷದ ಅತೀ ದೊಡ್ಡ ಮೊತ್ತವಾಗಿದೆ. ದೇವಾಂಕ್ ದಲಾಲ್ ಪಿಕೆಎಲ್ 11 ರಲ್ಲಿ ಬೆಸ್ಟ್ ರೈಡರ್ ರೂ. 2.205 ಕೋಟಿಗೆ ಬೆಂಗಾಲ್ ವಾರಿಯರ್ಸ್ ಗೆ ಹರಾಜಾಗಿದ್ದಾರೆ.
ಆಶು ಮಲಿಕ್ ರೂ. 1.90 ಕೋಟಿಗೆ ಮುಂದಿನ ಎರಡು ಋತುಗಳಿಗೆ ರೂಪಾಯಿಗಳಿಗೆ ಸಹಿ ಮಾಡಿದ್ದಾರೆ. ಅರ್ಜುನ್ ದೇಸ್ವಾಲ್ ರೂ. 1.405 ಕೋಟಿಗೆ ತಮಿಳು ತಲೈವಾಸ್ ತಂಡಕ್ಕೆ ಸೇರಿದ್ದಾರೆ.
ನವೀನ್ ಕುಮಾರ್ ರೂ. 1.20 ಕೋಟಿ, ಬೆಂಗಳೂರು ಬುಲ್ಸ್ , ಯೋಗೇಶ್ ರೂ. 1.12 ಕೋಟಿ, ಗಮನ್ ಸಿಂಗ್ ರೂ. 1.07 ಕೋಟಿ, ಸಚಿನ್ ತನ್ವರ್ ರೂ. 1.05 ಕೋಟಿ, ನಿತಿನ್ ಕುಮಾರ್ ರೂ. 1ಕೋಟಿಗೆ ಹರಾಜಾಗಿದ್ದಾರೆ.