IPL 2025 : ಇಂದು, ಜೂನ್ 1, 2025 ರಂದು, ಮುಂಬೈ ಇಂಡಿಯನ್ಸ್ (MI) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಐಪಿಎಲ್ 2025 ಕ್ವಾಲಿಫೈಯರ್ 2 ನೇ ಪಂದ್ಯವು ಆಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಮಳೆಯ ಕಾರಣದಿಂದ ಪಂದ್ಯ ಆರಂಭದಲ್ಲಿ ವಿಳಂಬವಾಗಿದೆ.
ಈ ಪಂದ್ಯವು ಸಂಪೂರ್ಣವಾಗಿ ರದ್ದಾದರೆ, ಬಿಸಿಸಿಐ ನಿಯಮಗಳ ಪ್ರಕಾರ, ಲೀಗ್ ಹಂತದಲ್ಲಿ ಉತ್ತಮ ಸ್ಥಾನದಲ್ಲಿದ್ದ ತಂಡವು ಫೈನಲ್‌ಗೆ ನೇರ ಪ್ರವೇಶ ಪಡೆಯುತ್ತದೆ. ಈ ಸಂದರ್ಭದಲ್ಲಿ, ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ ಉತ್ತಮ ಸ್ಥಾನದಲ್ಲಿದ್ದ ಕಾರಣ, ಅವರು ಫೈನಲ್‌ಗೆ ನೇರ ಪ್ರವೇಶ ಪಡೆಯುತ್ತಾರೆ.
ಒಂದು ವೇಳೆ ಮಳೆ ನಿಂತು ಪಂದ್ಯ ನಡೆದರೆ, 'ಕಡಿಮೆ ಓವರ್' ಗಳ ಪಂದ್ಯ ನಡೆಯಬಹುದು.
ಒಂದು ವೇಳೆ ಮಳೆ ಕಡಿಮೆಯಾಗಿ ಸ್ವಲ್ಪ ಸಮಯ ಸಿಕ್ಕಿದರೆ ಉಭಯ ತಂಡಗಳು 'ಸೂಪರ್ ಓವರ್' ಆಟ ಆಡಬಹುದು.
ಇದು ಎರಡು ನಡೆದೇ ಹೋದರೆ, ಪಂಜಾಬ್ ಕಿಂಗ್ಸ್ ಫೈನಲ್ ಗೆ ಪ್ರವೇಶ ಮಾಡಲಿದೆ.
ಫೈನಲ್ ಪಂದ್ಯವು ಜೂನ್ 3, 2025 ರಂದು ಆಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ, ಇಲ್ಲಿ ಬೆಂಗಳೂರು (RCB) ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ .