19 June 2025 | Join group

ಏನಿದು RCB ಅಭಿಮಾನಿಗಳ 18ರ ಲೆಕ್ಕಾಚಾರ ? ನೀವು ತಿಳಿದುಕೊಳ್ಳಿ : ಈ ಸಲ ಕಪ್ ನಮ್ದೇ ಎನ್ನುತ್ತಿದ್ದಾರೆ RCB ಪ್ರೇಮಿಗಳು!

  • 03 Jun 2025 10:53:38 AM

IPL : ಐಪಿಎಲ್ 2025 ನ ಮಹಾ ಕದನಕ್ಕೆ ಇಂದು ವೇದಿಕೆ ಸಿದ್ಧವಾಗಿದೆ. ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಐತಿಹಾಸಿಕ ಕ್ಷಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಸಾಕ್ಷಿಯಾಗಲಿದೆ.

 

ಆದರೆ RCB ಅಭಿಮಾನಿಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ಇದ್ದಾರೆ. RCB ಅಭಿಮಾನಿಗಳ ಪ್ರಕಾರ ಈ ವರ್ಷದ ಐಪಿಎಲ್ ಕಪ್ ನಮ್ಮದೇ ಎನ್ನುವ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ. ಆದರೆ ಬನ್ನಿ ನೋಡೋಣ ಯಾವೆಲ್ಲ ಲೆಕ್ಕಾಚಾರದಿಂದ RCB ಎಂದು ಕಪ್ ಎತ್ತಲಿದೆ.

 

RCB ಅಭಿಮಾನಿಗಳು ಸಲ ಕಪ್ ನಮ್ದೇ ಎನ್ನಲು 18 ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ,

ಮೊದಲ ಕಾರಣ - ಈ ಬಾರಿ ನಡೆಯುತ್ತಿರುವುದು 18ನೇ ಸೀಸನ್.

ಎರಡನೆಯ ಕಾರಣ - ಕೊಹ್ಲಿಯ ಜೆರ್ಸಿ ನಂಬರ್ ಕೂಡ 18.

ಮೂರನೆಯ ಕಾರಣ - ಕೊಹ್ಲಿ RCB ಪರ ಕಣಕ್ಕಿಳಿಯಲಾರಂಭಿಸಿ 18 ವರ್ಷಗಳಾಗಿವೆ.

ನಾಲ್ಕನೇ ಕಾರಣ - ನಿಷ್ಠಾವಂತ ಅಭಿಮಾನಿಗಳೇ ಎಂದು ಕರೆಯುವ RCB ಫ್ಯಾನ್ಸ್ ಗಳು ಕಪ್ ಗೆಲ್ಲುವ ಕಾಯುವಿಕೆ ಕೂಡ 18ನೇ ವರ್ಷಕ್ಕೆ ಕಾಲಿಟ್ಟಿದೆ.

 

ಈ ಎಲ್ಲಾ ಸಂಖ್ಯೆಗಳು 18 ಆಗಿರುವುದರಿಂದ ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ ಈ ಸಲ ಕಪ್ ನಮ್ದೇ ಎನ್ನುತ್ತಿದ್ದಾರೆ ಅಭಿಮಾನಿಗಳು.