ಸುಬ್ರಮಣ್ಯ: RCB ತಂಡ ನಿನ್ನೆ ನಡೆದ 18ನೇ ಆವೃತ್ತಿಯ ಐಪಿಎಲ್ 2025 ಪಂದ್ಯದಲ್ಲಿ ರೋಚಕ ಜಯ ಗಳಿಸಿದ ಸಂಭ್ರಮಾಚರಣೆ ರಾಜ್ಯ, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ನಡೆಯುತ್ತಿದೆ.
ನಿನ್ನೆ ರಾತ್ರಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ. ದೇವಸ್ಥಾನದ ಮಂಡಳಿ ಈ ಸಂಭ್ರಮಾಚರಣೆಯನ್ನು ನಡೆಸಿತ್ತು ಎನ್ನಲಾಗಿದೆ.
Celebratory Fireworks at Kukke Subrahmanya for RCB's Win pic.twitter.com/JVN1ogHCd1
— ಮನು ???? (@sampras004) June 4, 2025
RCB ತಂಡ ಪಂಜಾಬ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅತ್ಯಂತ ಉತ್ಕೃಷ್ಟ ಆಟವನ್ನು ಪ್ರದರ್ಶಿಸಿ ಐತಿಹಾಸಿಕ ಗೆಲುವು ದಾಖಲಿಸಿತು.
ಈ ಜಯದ ನಂತರ ಕರ್ನಾಟಕದ ವಿವಿಧ ಕಡೆಗಳಲ್ಲಿ ಅಭಿಮಾನಿಗಳು ರಸ್ತೆಗಳ ಮೇಲೆ ನೃತ್ಯ ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ನಿನ್ನೆ ಸಂಜೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ, ಭಜನೆ ಕಾರ್ಯಕ್ರಮಗಳು ನಡೆದಿದ್ದು, RCB ಗೆ ಸಿಕ್ಕ ಈ ಜಯ ದೇವರ ಅನುಗ್ರಹ ಎಂದು ಭಕ್ತರು ಹೇಳಿದ್ದಾರೆ.