ಯುಎಇ: ಎಂಟು ತಂಡಗಳನ್ನು ಒಳಗೊಂಡಿರುವ 2025ರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವುದು ಎಂದು ಏಷಿಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪ್ರಕಟಿಸಿದೆ. 2025ರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 28ರ ವರೆಗೆ ನಡೆಯಲಿದೆ ಯುಎಇ ದೇಶದಲ್ಲಿ ನಡೆಯಲಿದೆ.
ಇಂಡಿಯಾ, ಪಾಕಿಸ್ತಾನ, ಯುಎಇ ಮತ್ತು ಓಮನ್ ದೇಶಗಳು ಗ್ರೂಪ್ ಎ ತಂಡಗಳಲ್ಲಿ ಆಡಿದರೆ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಹೊಂಗ್ ಕೊಂಗ್ ದೇಶಗಳು ಗ್ರೂಪ್ ಬಿ ತಂಡದಲ್ಲಿ ಸೇರ್ಪಡೆಯಾಗಿದೆ. ಫೈನಲ್ ಪಂದ್ಯ ದುಬೈ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ಆಪರೇಷನ್ ಸಿಂಧೂರ ಘರ್ಷಣೆಯ ನಂತರ, ಮೊದಲ ಬಾರಿಗೆ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ರೋಚಕ ಸನ್ನಿವೇಶಗಳಿಗೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.
ಯುಎಇ ದೇಶದಲ್ಲಿರುವ ಪ್ರಮುಖ ಮೈದಾನಗಳಾದ ದುಬೈ ಮತ್ತು ಅಬುಧಾಬಿಯಲ್ಲಿ ಹೆಚ್ಚಿನ ಪಂದ್ಯಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಆಂತರಿಕ ಕಲಹ ಇರುವುದರಿಂದ ಏಷ್ಯಾ ಕಪ್ ನಡೆಸುವುದರ ಬಗ್ಗೆ ಕೆಲವು ಪಾಕಿಸ್ತಾನದ ಜೊತೆ ಪಂದ್ಯ ನಡೆಸಬಾರದು ಎಂಬ ವಿರೋಧ ಕೂಡ ವ್ಯಕ್ತಪಡಿಸುತ್ತಿದ್ದಾರೆ.