23 October 2025 | Join group

ಪಾಕಿಸ್ತಾನ ವಿರುದ್ಧ ಭಾರತಕ್ಕೆ ಮತ್ತೆ ಭರ್ಜರಿ ಜಯ

  • 22 Sep 2025 08:02:19 AM

ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಮತ್ತೆ ಭರ್ಜರಿ ಜಯ ಗಳಿಸಿದೆ. 

 

ಟಾಸ್ ವೇಳೆ ನಿರೀಕ್ಷೆಯಂತೆ ಪಾಕಿಸ್ತಾನ ನಾಯಕನ ಜೊತೆಗೆ ಹ್ಯಾಂಡ್ ಶೇಕ್ ಮಾಡದ ಸೂರ್ಯ ಕುಮಾರ್ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಫರಾನ್ 58 ರನ್ ಗಳಿಸಿದರು. ಭಾರತ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಅಭಿಷೇಕ್ ಶರ್ಮಾ 74, ಗಿಲ್ 47, ತಿಲಕ್ ಅಜೇಯ 30 ರನ್ ಗಳಿಸಿದರು.

 

ಪಾಕಿಸ್ತಾನ ವಿರುದ್ಧ ಭಾರತ ಜಯ ಗಳಿಸಿದ ಹಿನ್ನೆಲೆಯಲ್ಲಿ ಎಲ್ಲೆಡೆ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.