ದುಬೈ: ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದ ಏಷ್ಯಾ ಕಪ್ 2025ರ ಭಾರತ–ಪಾಕಿಸ್ತಾನ ಫೈನಲ್ ರೋಚಕ ತಿರುವು ಪಡೆದುಕೊಂಡಿತ್ತು. ಭಾರತ ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿತು. ಪಾಕಿಸ್ತಾನವು ಆರಂಭದಲ್ಲಿ ಸ್ವಲ್ಪ ಪ್ರತಿರೋಧ ತೋರಿಸಿದರೂ, ಭಾರತೀಯ ಬೌಲರ್‌ಗಳ ಎದುರು ಹೆಚ್ಚು ಕಾಲ ತಾಳಲಿಲ್ಲ. ಕೇವಲ 19.1 ಓವರ್‌ಗಳಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ಆಲ್‌ಔಟ್ ಆಯಿತು. ಕೆಲವು ಬ್ಯಾಟ್ಸ್‌ಮನ್‌ಗಳು ಮಾತ್ರ ಅಲ್ಪ ಪ್ರಮಾಣದಲ್ಲಿ ರನ್‌ಗಳನ್ನು ಗಳಿಸಿದರು.
ಪಾಕಿಸ್ತಾನ ತಂಡದಿಂದ ಸಾಹಿಬ್‌ಜಾದಾ ಫರ್ಹಾನ್ 38 ಎಸ್ತೆಗಳಲ್ಲಿ 3 ಸಿಕ್ಸರ್ ಬಾರಿಸಿ 57 ರನ್ ಗಳಿಸಿದರೆ, ಫಖರ್ ಜಮಾನ್ 46 (35 ಬಾಲ್ ) ರನ್ ಗಳಿಸಿದ್ದರು. ಭಾರತದ ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಪಾಕಿಸ್ತಾನವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಬುಮ್ರಾ, ಅಕ್ಸರ್ ಹಾಗೂ ಚಕ್ರವರ್ತಿ ತಲಾ ಒಂದು ಒಂದು ವಿಕೆಟ್‌ಗಳನ್ನು ಪಡೆದರು.
ರನ್ ಚೇಸ್ ಮಾಡಲು ಇಳಿದ ಭಾರತ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಮೊದಲ ಮೂರು ವಿಕೆಟ್‌ಗಳನ್ನು ಶೀಘ್ರದಲ್ಲೇ ಕಳೆದುಕೊಂಡ ಭಾರತ ಸಂಕಷ್ಟ ಎದುರಿಸಿದರೂ, ನಂತರ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಸ್ಥಿರ ಬ್ಯಾಟಿಂಗ್ ಮೂಲಕ ತಂಡವನ್ನು ಸಮತೋಲನಕ್ಕೆ ತಂದು ನಿಲ್ಲಿಸಿಲು ಪ್ರಯತಿಸಿದರು. ಸಂಜು ಸ್ಯಾಮ್ಸನ್ 24 ರನ್ ಗಳಿಸಿ ಔಟ್ ಆಗಿ ಫೆವಿಲಿಯನ್ ಮರಳಿದರು. ನಂತರ ಬಂದ ಶಿವಂ ದುಬೆ ಉತ್ತಮ ಬ್ಯಾಟಿಂಗ್ ಮಾಡಿ 33 ರನ್ ಬಾರಿಸಿದರು.
ತಿಲಕ್ ವರ್ಮಾ ಆಡಿದ ಭರ್ಜರಿ ಬ್ಯಾಟಿಂಗ್ ನಿಂದ 53 ಬಾಲ್ ಗಳಲ್ಲಿ, 3 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 69 ರನ್ ಮಾಡಿ ಅಜೇಯರಾಗಿ ಉಳಿದರು. ಪಾಕಿಸ್ತಾನವನ್ನು ಸೋಲಿಸಿ ಭಾರತ ಏಷ್ಯಾ ಕಪ್ 2025 ಜಯಿಸಿ ಸಂಭ್ರಮಿಸಿದೆ.