ಬಿಹಾರ : ಇದೇ ಮೊದಲ ಬಾರಿಗೆ ವಿಶ್ವ ದರ್ಜೆಯ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಬಿಹಾರದ ರಾಜಗೀರ್‌ನಲ್ಲಿ 633 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ನಳಂದ ಜಿಲ್ಲೆಯ ರಾಜಗೀರ್‌ನಲ್ಲಿ ತನ್ನ ಮೊದಲ ವಿಶ್ವ ದರ್ಜೆಯ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸುವುದರೊಂದಿಗೆ ಬಿಹಾರವು ತನ್ನ ಕ್ರೀಡಾ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ.
ಈ ಅತ್ಯಾಧುನಿಕ ಸೌಲಭ್ಯವು ರಾಜ್ಯದಲ್ಲಿ ಕ್ರಿಕೆಟ್ ಮೂಲಸೌಕರ್ಯವನ್ನು ಉನ್ನತೀಕರಿಸುವ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ನಿರೀಕ್ಷೆಯಿದೆ.
ಇಂಗ್ಲೆಂಡ್ ನಲ್ಲಿರುವ ಐಕಾನಿಕ್ ಸಿಡ್ನಿ ಕ್ರಿಕೆಟ್ ಮೈದಾನದ ಮಾದರಿಯಲ್ಲಿ ಬಿಹಾರದ ಹೊಸ ಸ್ಟೇಡಿಯಂನ್ನುನಿರ್ಮಿಸಲಾಗಿದ್ದು, ಸುಮಾರು 45,000 ಪ್ರೇಕ್ಷಕರು ಪಂದ್ಯ ನೋಡುವ ಸಾಮರ್ಥ್ಯವನ್ನು ಹೊಂದಿದೆ.
ಅಕ್ಟೋಬರ್ 2018 ರಲ್ಲಿ ಅಡಿಪಾಯ ಹಾಕಲಾಗಿದ್ದು, 2025 ರ ಮಧ್ಯಭಾಗದಲ್ಲಿ ಪ್ರಮುಖ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
13 ಆಟದ ಮೈದಾನಗಳನ್ನು ಹೊಂದಿದ್ದು, ಐದು ಅಂತಸ್ತಿನ ಪೆವಿಲಿಯನ್, ಜಿಮ್ನಾಷಿಯಂ, ಸ್ಪಾ, ಫಿಸಿಯೋಥೆರಪಿ ಕೊಠಡಿ, ವೈದ್ಯಕೀಯ ಕೇಂದ್ರ, ಕಾಮೆಂಟರಿ ಬಾಕ್ಸ್‌ಗಳು, ಕ್ಯಾಮೆರಾ ಡೆಕ್‌ಗಳು ಮತ್ತು ಕಾರ್ಪೊರೇಟ್ ಸೂಟ್‌ಗಳನ್ನು ಒಳಗೊಂಡಿದೆ.
ಆಧುನಿಕ ರೀತಿಯಸುಧಾರಿತ ಒಳಚರಂಡಿ ವ್ಯವಸ್ಥೆ ಮಾಡಲಾಗಿದ್ದು, ಮಳೆಗಾಲದಲ್ಲಿಯೂ ಪಂದ್ಯಗಳನ್ನು ನಡೆಸುವ ವ್ಯವಸ್ಥೆ ಹೊಂದಿದೆ.
ರಾಜ್‌ಗೀರ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಕೇವಲ ಕ್ರೀಡಾ ಸ್ಥಳವಲ್ಲ - ಇದು ಭಾರತದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡೆಗಳಿಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವ ಬಿಹಾರದ ಮಹತ್ವಾಕಾಂಕ್ಷೆಯ ಸಂಕೇತವಾಗಿದೆ.