ನವದೆಹಲಿ: ಭಾರತದ ಚಿನ್ನದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯಿಂದ ಗೌರವ ಮಾಡಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಒಎಎಸ್ ಜನರಲ್ ಉಪೇಂದ್ರ ದ್ವಿವೇದಿ ನೇತೃತ್ವದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ನೀರಜ್ ಚೋಪ್ರಾ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಗೌರವ ಪ್ರದಾನ ಮಾಡಿದರು.
ಅವರ ಒಲಿಂಪಿಕ್ ವಿಜಯ ಮತ್ತು ಲಕ್ಷಾಂತರ ಭಾರತೀಯ ಯುವಕರಿಗೆ ಸ್ಫೂರ್ತಿ ನೀಡಿದ ಕೊಡುಗೆಯನ್ನು ಗುರುತಿಸಿ ಈ ಗೌರವನ್ನು ನೀಡಲಾಗಿದೆ.