93 ವರ್ಷಗಳ ಇತಿಹಾಸದಲ್ಲೇ ಟೀಮ್ ಇಂಡಿಯಾಗೆ ಭಾರೀ ಮುಖಭಂಗ

  • 16 Nov 2025 05:49:28 PM

ಕೊಲ್ಕತ್ತಾ: ಭಾರತ ತಂಡವು 93 ವರ್ಷಗಳಲ್ಲಿ ಹಲವು ಏಳು ಬೀಳುಗಳನ್ನು ಕಂಡಿದೆ. ಆದ್ರೆ ಏಳು ಬೀಳುಗಳ ನಡುವೆ ಇದೀಗ ಭಾರತ ತಂಡವು ಸೋತು ಭಾರೀ ಮುಖಭಂಗ ಅನುಭವಿಸಿದೆ.

 

ಸ್ಪಿನ್ನರ್‌ ಗಳ ಬಲೆಗೆ ಬಿದ್ದ ಭಾರತ ತಂಡ ಎರಡನೇ ಇನಿಂಗ್ಸ್‌ ನಲ್ಲಿ 93 ರನ್‌ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದೆ. ಮೊದಲ ಟೆಸ್ಟ್‌ ಪಂದ್ಯವನ್ನು 30 ರನ್‌ ನೊಂದಿಗೆ ಗೆದ್ದ ದಕ್ಷಿಣ ಆಫ್ರಿಕಾ ತಂಡ ಭಾರತದ ನೆಲದಲ್ಲಿ 15 ವರ್ಷಗಳ ನಂತರ ಇದೇ ಮೊದಲ ಬಾರಿ ಟೆಸ್ಟ್‌ ಗೆದ್ದು ಇತಿಹಾಸ ನಿರ್ಮಿಸಿದೆ.

 

ಕೋಲ್ಕತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಭಾನುವಾರ 7 ವಿಕೆಟ್‌ ಗೆ 93 ರನ್‌ ಗೆ ಎರಡನೇ ಇನಿಂಗ್ಸ್‌ ಮುಕ್ತಾಯಗೊಂಡಿತು.

 

ಮೊದಲ ಇನಿಂಗ್ಸ್‌ ನಲ್ಲಿ 30 ರನ್‌ ಗಳ ಮುನ್ನಡೆ ಪಡೆದಿದ್ದ ಭಾರತ ತಂಡ ಎರಡನೇ ಇನಿಂಗ್ಸ್‌ ನಲ್ಲಿ 93 ರನ್‌ ಗೆ ಪತನಗೊಂಡು 30 ರನ್‌ ಗಳಿಂದ ಸೋಲುಂಡಿತು.