06 August 2026 |

ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್: ಮಂಗಳೂರಿನ ಡ್ಯಾಶಿಯಲ್‌ಗೆ ಚಿನ್ನ ಹಾಗೂ ಮೂರು ಬೆಳ್ಳಿ ಪದಕ

  • 03 Jul 2026 11:35:02 AM

ಮಂಗಳೂರು: ಡೆಹ್ರಾಡೂನ್‌ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ಡ್ಯಾಶಿಯಲ್ ಕಾನ್ಸೆಸ್ಸೊ ಉತ್ತಮ ಸಾಧನೆ ಮಾಡಿದ್ದಾರೆ.

 

ಹಿರಿಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಅವರು ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ 500 ಮೀಟರ್, 1000 ಮೀಟರ್ ಹಾಗೂ 1500 ಮೀಟರ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

 

ಡ್ಯಾಶಿಯಲ್ ಪ್ರಸ್ತುತ ಮಂಗಳೂರಿನ ಎಸ್‌ಡಿಎಂ ಸಂಸ್ಥೆಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಮಂಗಳೂರಿನ ದೇರೆಬೈಲ್ ನಿವಾಸಿಗಳಾದ ಫ್ರಾನ್ಸಿಸ್ ಹಾಗೂ ಡೋರಿಸ್ ಕಾನ್ಸೆಸ್ಸೊ ಅವರ ಪುತ್ರಿಯಾಗಿದ್ದಾರೆ.