11 August 2025 | Join group

ಜೂನ್ 20 ರಂದು ಕಡೇಶ್ವಾಲ್ಯ 'ಪ್ರಗತಿ ಸೌಧ' ಉದ್ಘಾಟನೆಗೆ ಭಾರೀ ಸಿದ್ಧತೆ: ಜನಪ್ರತಿನಿಧಿಗಳ ಭವ್ಯ ಸಮ್ಮೇಳನ

  • 18 Jun 2025 08:10:56 PM

ಕಡೇಶಿವಾಲಯ, ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್ ಮತ್ತು ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ "ಪ್ರಗತಿ ಸೌಧ" ಪಂಚಾಯತಿ ಕಚೇರಿ ಹಾಗೂ ಸಭಾಂಗಣ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 20.06.2025 ರ ಶುಕ್ರವಾರ ಸಮಯ ಪೂರ್ವಾಹ್ನ ಗಂಟೆ 10:30 ಕ್ಕೆ ಕಡೇಶ್ವಾಲ್ಯ ಗ್ರಾಮ ಪಂಚಾಯತ್ ನಲ್ಲಿ ನೆರವೇರಲಿದೆ.

 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ವಿಧಾನಸಭಾ ಶಾಸಕರು ಶ್ರೀ ರಾಜೇಶ್ ನಾಯ್ಕ್ ವಹಿಸಿದ್ದು, ಉದ್ಘಾಟಕರಾಗಿ ಶ್ರೀ ದಿನೇಶ್ ಗುಂಡೂರಾವ್, ಆರೋಗ್ಯಾ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಶ್ರೀ ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಗೌರವ ಉಪಸ್ಥಿತಿ ಇರಲಿದೆ.

 

ಕರ್ನಾಟಕ ವಿಧಾನಸಭಾ ಸ್ಪೀಕರ್ ಶ್ರೀ ಯು.ಟಿ. ಖಾದರ್ ರವರು ಕೂಡ ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ, ಯಸ್. ಎಲ್ ಭೋಜೇ ಗೌಡ, ಐವನ್ ಡಿಸೋಜಾ, ಪ್ರತಾಪ್ ಸಿಂಹ ನಾಯಕ್, ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಬಿ. ಆರ್ ಮತ್ತಿತ್ತರ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 

ಈ ಎಲ್ಲಾ ಕಾರ್ಯಕ್ರಮಕ್ಕೆ ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಭಾರತಿ ಯಸ್. ರಾವ್, ಉಪಾದ್ಯಕ್ಷರು, ಪಂಚಾಯತ್ ಅಧಿಕಾರಿ, ಕಾರ್ಯದರ್ಶಿ, ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.