ಖಾಸಗಿ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ಬಿಲ್ ಜೊತೆಗೆ ಸೇವಾ ಶುಲ್ಕ ಹಾಕೋದು ಸರ್ವೇ ಸಾಮಾನ್ಯ. ಆದರೆ ಈಗ ದೆಹಲಿ ಹೈಕೋರ್ಟ್ ಇನ್ನು ಮುಂದೆ ದೇಶದಾದ್ಯಂತ ಒತ್ತಾಯವಾಗಿ ಸೇವಾ ಶುಲ್ಕವನ್ನು ಹಾಕಬಾರದೆಂದು ಕಾನೂನು ಹೊರಡಿಸಿದೆ.
ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ, ಖಾಸಗಿ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳು ಗ್ರಾಹಕರಿಗೆ ಸೇವಾ ಶುಲ್ಕ ಹಾಕುವಂತಿಲ್ಲಾ, ಗ್ರಾಹಕರು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕ ನೀಡಿದರೆ ಮಾತ್ರ ತಗೆದುಕೊಳ್ಳಬೇಕು ಎಂದು ಮಾರ್ಗಸೂಚಿಯನ್ನು ಪ್ರಶ್ನಿಸಿ, ಆದೇಶ ಉಲ್ಲಂಘಿಸಿ, ಸೇವಾ ಶುಲ್ಕ ಪಡೆದುಕೊಂಡು, ಮಾರ್ಗಸೂಚಿಯ ವಿರುದ್ದವೇ ಕೋರ್ಟ್ ಮೊರೆ ಹೋಗಿತ್ತು.
ಗ್ರಾಹಕರಿಂದ ಬಂದ ದೂರಿನ ಮೇರೆಗೆ ಕೇಂದ್ರ ಸರಕಾರದ ನೇತೃತ್ವದಲ್ಲಿ ರೂಪಗೊಂಡಿದ್ದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸೇವಾ ಶುಲ್ಕ ನಿಷೇಧಿಸಬೇಕೆಂದು ಹೊಟೇಲ್ ಹಾಗೂ ರೆಸ್ಟೋರೆಂಟ್ ಮಾರ್ಗಸೂಚಿ ಹೊರಡಿಸಿತ್ತು.
ದೆಹಲಿ ಹೈಕೋರ್ಟ್ ಈ ವಿಷಯವನ್ನು ಎತ್ತಿಹಿಡಿದು, ಸಿಸಿಪಿಎ ಮಾರ್ಗಸೂಚಿ ಪಾಲಿಸುವಂತೆ ಆದೇಶ ಹೊರಡಿಸುವುದರ ಜೊತೆಗೆ ಹೋಟೆಲ್ ಅಸೋಸಿಯೇಷನ್ ಗೆ ದಂಡ ವಿಧಿಸಿದೆ.
ಒಂದು ವೇಳೆ ಗ್ರಾಹಕರು ತಮ್ಮ ಇಚ್ಛೆಯಿಂದ ಸೇವಾ ಶುಲ್ಕ ಕೊಡಲು ಮುಂದಾದರೆ, ಅದನ್ನು ಖಾಸಗಿ ಹೊಟೇಲ್ ಹಾಗೂ ರೆಸ್ಟೋರೆಂಟ್ ಸ್ವೀಕರಿಸಬಹುದು ಆದರೆ ಬಲವಂತಾಗಿ ಪಡೆಯುವಂತಿಲ್ಲ ಎಂದು ತಿಳಿಸಿದೆ.