20 June 2025 | Join group

3 ತಿಂಗಳ ಮುಗ್ದ ಮಗು ರಸ್ತೆಯಲ್ಲಿ : ಪೋಷಕರ ಪತ್ತೆಗೆ ಮನವಿ.

  • 01 Apr 2025 07:35:55 PM

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ-ಮುಂಡ್ರೋಟ್ಟು ರಸ್ತೆಯಲ್ಲಿ ಮಗುವೊಂದು ಪತ್ತೆಯಾಗಿದೆ. ಅಂದಾಜು 3 ತಿಂಗಳ ಹೆಣ್ಣು ಮಗು ಎಂದು ಗುರುತಿಸಲಾಗಿದೆ.

 

ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಪುತ್ತೂರಿನ ನೆಲ್ಲಿಕಟ್ಟೆ, ಕೇರ್ ಆಫ್ ರಾಮಕೃಷ್ಣ ಸೇವಾ ಸಮಾಜದ ವಾತ್ಸಲ್ಯಧಾಮ ಮಕ್ಕಳ ದತ್ತು ಕೇಂದ್ರದಲ್ಲಿ ಮುಗ್ದ ಮಗುವನ್ನು ದಾಖಲಿಸಲಾಗಿದೆ. ರಾಮಕೃಷ್ಣ ಸೇವಾಶ್ರಮದ ಕಾರ್ಯಕರ್ತರು ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

 

ಮಗುವಿನ ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ,1 ನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ, ದೂರವಾಣಿ ಸಂಖ್ಯೆ:0824-2440004 ಸಂಪರ್ಕಿಸುವುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಮಂಗಳೂರಿನ ಪ್ರತಿಷ್ಠಿತ ಡಿಜಿಟಲ್ ಪತ್ರಿಕೆಯಲ್ಲಿ ಪ್ರಕಟಣೆಯಾಗಿದೆ.