LIVE: ಏಪ್ರಿಲ್ 01, 2026 : ಕರ್ನಾಟಕ ಮತ್ತು ದೇಶದ ಪ್ರಮುಖ ಸುದ್ದಿಗಳು, ಅಪ್ಡೇಟ್‌ಗಳು

  • 01 Apr 2026 12:37:26 AM

ಕರ್ನಾಟಕ ಮತ್ತು ದೇಶ - ವಿದೇಶದ ರಾಜಕೀಯ, ಆಡಳಿತ, ಪ್ರಕಟಣೆ, ಮನೋರಂಜನೆ ಹಾಗೂ ಇನ್ನಿತರ ದಿನವಿಡೀಯ ಪ್ರಮುಖ ಅಪ್ಡೇಟ್‌ಗಳು:


11:15 PM | ಸೌರವ್ ಗಂಗೂಲಿ ಬಯೋಪಿಕ್ ಬೆಳ್ಳಿತೆರೆಗೆ 

ಭಾರತ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಅವರ ಬಯೋಪಿಕ್ ಆಧಾರಿತ ಸಿನಿಮಾ ಬೆಳ್ಳಿ ತೆರೆಗೆ ಬರಲಿದೆ. ನಟ ರಾಜಕುಮಾರ್ ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕೆ ಮುಹೂರ್ತ ಮಾಡಲಾಗಿದೆ.


8:15 PM | ಇರಾನ್ ಕದನ ವಿರಾಮ ಕೋರಿದೆ- ಟ್ರಂಪ್

ಇರಾನ್‌ನ "ಹೊಸ ಆಡಳಿತ ಅಧ್ಯಕ್ಷರು" ಅಮೆರಿಕದಿಂದ ಕದನ ವಿರಾಮ ಕೋರಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ ಮತ್ತು ಅವರನ್ನು “ಹೆಚ್ಚು ಬುದ್ಧಿವಂತ" ಎಂದು ಬಣ್ಣಿಸಿದ್ದಾರೆ.


7:15 PM |  ಜುಲೈ ತಿಂಗಳಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಗೆ 

ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆಯು ಟೀಂ ಇಂಡಿಯಾ ಜುಲೈ 23 ರಿಂದ 26ರವರೆಗೆ ಜಿಂಬಾಬ್ವೆಯಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಟಿ20 ವಿಶ್ವಕಪ್ ಗೆಲುವಿನ ನಂತರದ ಮೊದಲ ಸರಣಿ ಇದಾಗಿದ್ದು, ಹರಾರೆಯಲ್ಲಿ ಪಂದ್ಯಗಳು ನಡೆಯಲಿವೆ. ಬಳಿಕ 2027ರ ಜನವರಿಯಲ್ಲಿ ಜಿಂಬಾಬ್ವೆ ಭಾರತಕ್ಕೆ ಏಕದಿನ ಸರಣಿಗಾಗಿ ಬರಲಿದೆಯಂತೆ.


5:00 PM |  ಚಾರ್ಮಾಡಿ ಘಾಟಿ ಅಭಿವೃದ್ಧಿ ವಿಳಂಬ 

ಅರಣ್ಯ ಅನುಮತಿ ಇಲ್ಲದೆ ಚಾರ್ಮಾಡಿ ಹೆದ್ದಾರಿ ಕಾಮಗಾರಿ ವಿಳಂಬ. ಚಾರ್ಮಾಡಿ ಘಾಟಿ ಅಭಿವೃದ್ಧಿ ಅರಣ್ಯ ಇಲಾಖೆಯ ಅನುಮತಿ ಸಿಗದೆ ತಡವಾಗಿದೆ. ಮಳೆಗಾಲದ ಮುನ್ನ ಕಾಮಗಾರಿ ಆರಂಭ ಸಾಧ್ಯತೆ ಕಡಿಮೆ. 11 ಕಿ.ಮೀ ರಸ್ತೆ ಅಗಲಕ್ಕೆ ₹343 ಕೋಟಿ ಮೀಸಲು.

1:45 PM | ನಟ ರಕ್ಷಿತ್‍ ಶೆಟ್ಟಿಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ. ದಂಡ

ರಕ್ಷಿತ್‍ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದಲ್ಲಿ ಕಾಪಿರೈಟ್‍ ಕಾಯ್ದೆ ಉಲ್ಲಂಘಿಸಿ, ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡುಗಳನ್ನು ಯಾವುದೇ ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಎಂ.ಆರ್.ಟಿ ಮ್ಯೂಸಿಕ್‍ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ  ಕಾಪಿರೈಟ್ ಆಗಿದೆ ಎಂಬ ಕಾರಣಕ್ಕೆ ರಕ್ಷಿತ್‍ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಲಾಗಿದೆ.


1:00 PM | ಏಪ್ರಿಲ್ ಬುದ್ಧಿವಂತರ ದಿನ: ಉಪೇಂದ್ರ

‘ಪ್ರಜಾಕೀಯ’ ಪಕ್ಷದ ಆ್ಯಪ್ ಲಾಂಚ್ ಮಾಡುವ ಸಂದರ್ಭದಲ್ಲಿ ಮಾತನಾಡಿದ ನಟ ಉಪೇಂದ್ರ ಏಪ್ರಿಲ್ 1ರಂದು ಮೂರ್ಖರ ದಿನ ಎಂದು ಆಚರಣೆ ಮಾಡಲಾಗುತ್ತದೆ. ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಇಂದು ಆಗುತ್ತದೆ. ಆದರೆ, ಈ ದಿನವನ್ನು ಬುದ್ಧಿವಂತರ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿದ್ದಾರೆ. ಮಾತನಾಡುವಾಗ ಎಚ್ಚರಿಕೆ ಬೇಕು. ಇಲ್ಲವಾದರೆ, ಇವರು ಎಡ, ಬಲ ಎಂದು ನಿರ್ಧರಿಸಿ ಬಿಡುತ್ತಾರೆ’ ಎನ್ನುವ ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ.


12:45 PM | ಪ್ರಿಯಾಂಕಾ ಚೋಪ್ರಾ ವಿಡಿಯೋ ವೈರಲ್ 

ದರ್ಬಾರ್ ಸಾಹೀಬ್ ಎಂದು ಕರೆಯಲಾಗುವ ಸಿಖ್ಖರ ಈ ಪವಿತ್ರ ದೇವಾಲಯದಲ್ಲಿ, ದೇವಾಲಯಕ್ಕೆ ಬಂದ ಭಕ್ತರ ಊಟ ತಿಂದ ತಟ್ಟೆಗಳು, ಲೋಟಗಳನ್ನು ತೊಳೆದ ನಟಿ ಪ್ರಿಯಾಂಕಾ ಅವರು ಈ ‘ಬರ್ತನ್ ಸೇವಾ’ (ಪಾತ್ರೆಗಳ್ನು ತೊಳೆಯುವ ಸೇವೆ) ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.


12:20 PM | ಮೋದಿ ಇನ್ ಅಸ್ಸಾಂ 

ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ದಿಬ್ರುಗಢ ಜಿಲ್ಲೆಯಲ್ಲಿನ ಚಹಾ ತೋಟಕ್ಕೆ ಭೇಟಿ ನೀಡುವ ಮೂಲಕ ಅಲ್ಲಿರುವ ಮಹಿಳಾ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು ಮತ್ತು ಅಸ್ಸಾಮಿ ಚಹಾದ ಜಾಗತಿಕ ಮಹತ್ವದ ಬಗ್ಗೆ ಮಾತನಾಡಿದರು. ತನ್ನ ಈ ಭೇಟಿಯನ್ನು ಸ್ಮರಣೀಯ ಅನುಭವ ಎಂದು ಕರೆದ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.


12:00 PM | ಐಪಿಎಲ್ ನಲ್ಲಿ ಕಳ್ಳತನ

ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರೀ ಮೊತ್ತದ ಮೊಬೈಲ್ ಕಳ್ಳತನ! 

ಬೆಂಗಳೂರಿನಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಮೊಬೈಲ್ ಕದಿಯಲು ಅಪ್ರಾಪ್ತ ವಯಸ್ಕರನ್ನು ನೇಮಿಸಿಕೊಳ್ಳಲಾಗಿದ್ದು, ₹18 ಲಕ್ಷ ಮೌಲ್ಯದ 21 ಫೋನ್‌ಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.


11:30 AM | ದೆಹಲಿ | ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ 

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಬುಧವಾರ ವಾಣಿಜ್ಯ ಎಲ್‌ಪಿಜಿ ಬೆಲೆಯನ್ನು 195.50 ರೂ. ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,161 ರೂ.ಗೆ ಏರಿಕೆಯಾಗಿದೆ.


10:30 AM | ಚಿನ್ನ, ಬೆಳ್ಳಿ ಬೆಲೆ ಹೆಚ್ಚಳ 

ಮಧ್ಯಪ್ರಾಚ್ಯ ಸಂಘರ್ಷ ಉಲ್ಬಣ: ಚಿನ್ನ- ಬೆಳ್ಳಿ ದರದಲ್ಲಿ ಮತ್ತೆ ಹೆಚ್ಚಳ

ಏಪ್ರಿಲ್ ತಿಂಗಳ ಮೊದಲನೇ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಭಾರಿ ಏರಿಕೆ ಆಗಿವೆ. ಜಾಗತಿಕ ಉದ್ವಿಗ್ನ ಪರಿಸ್ಥಿತಿಯು, ಬೆಲೆ ಏರಿಕೆಗೆ ಕಾರಣವಾಗಿದೆ.


10:00 AM | ಇಸ್ರೇಲ್,ಯುಎಸ್ - ಇರಾನ್ ಯುದ್ಧ 

ಅಮೇರಿಕ ಕಂಪನಿಗಳ ಮೇಲೆ ದಾಳಿ ನಡೆಸುವ ಬೆದರಿಕೆ

ಟಾಪ್ ನಾಯಕರ ಹತ್ಯೆಗೆ ಪ್ರತೀಕಾರಕ್ಕೆ US ಟೆಕ್ ಸಂಸ್ಥೆಗಳ ಮೇಲೆ IRGC ದಾಳಿ ಬೆದರಿಕೆ ನೀಡಿದೆ. ಇರಾನ್‌ ಹಿಟ್‌ ಲಿಸ್ಟ್‌ ನಲ್ಲಿ ಗೂಗಲ್‌,ಮೆಟಾ ಸೇರಿ 18 ಕಂಪನಿಗಳು ಸೇರಿಕೊಂಡಿವೆ ಎನ್ನಲಾಗಿದೆ. 


9:35 AM | ಕರ್ನಾಟಕ | ರಾಜಕೀಯ

ಬಿಜೆಪಿ ಬೆಂಬಲಿಸುವವರೂ ಕೂಡ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು - ಸಿಎಂ ಸಿದ್ದರಾಮಯ್ಯ

ನಿನ್ನೆ ನಡೆದ ಬಾಗಲಕೋಟೆ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಾತನಾಡಿ, ನಾವು ನೀಡುವ ಗ್ಯಾರಂಟಿಗಳ ಫಲಾನುಭವಿಗಳಲ್ಲಿ ಬಿಜೆಪಿ ಬೆಂಬಲಿಗರು ಕೂಡ ಸೇರಿದ್ದಾರೆ ಎಂದು ಹೇಳುತ್ತಾ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.


9:15 AM | ಕರ್ನಾಟಕ | ಬೆಲೆ ಏರಿಕೆಯ ಬಿಸಿ

ಕರ್ನಾಟಕದಲ್ಲಿ ಏಪ್ರಿಲ್ 1 ರಿಂದ ಬೆಲೆ ಏರಿಕೆಗೆ ಸಿದ್ಧತೆ

ವಿದ್ಯುತ್, ನೀರು, ಟೋಲ್‌ಗಳು ಮತ್ತು ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್ ಕರ್ನಾಟಕದ ಜನತೆಗೆ ಸಿಗಲಿದೆ. ವಿದ್ಯುತ್ ದರ ಪ್ರತಿ ಯೂನಿಟ್ 40-150 ರೂ. ರಷ್ಟು ಏರಿಕೆ.