ಮಂಗಳೂರು, ಏಪ್ರಿಲ್ 29: ಕೊಳಕು ಹಿಂದೂಗಳು, ನಾನು ಭಾರತವನ್ನು ದ್ವೇಷ ಮಾಡುತ್ತೇನೆ ಎಂದು ಬರೆದ ಮಂಗಳೂರಿನ ಮುಸ್ಲಿಂ ವೈದ್ಯೆಯ ವಿರುದ್ಧ ಕೇಸು ದಾಖಲಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯಯೊಬ್ಬಳು ಸಾಮಾಜಿಕ ಜಾಣತಾಲದಲ್ಲಿ ಬರೆದು ಹಾಕಿದ ದೇಶ ವಿರೋಧಿ ಪೋಸ್ಟ್ ಭಾರಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆ ಯ ವೈದ್ಯೆ ಅಫೀಪ ಫಾತಿಮಾ ಎನ್ನುವಾಕೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಮತ್ತು ಭಾರತ ದೇಶದ ವಿರುದ್ಧ ಧರ್ಮ ಮತ್ತು ದೇಶ ವಿರೋಧಿ ಬರಹ ಹಾಕಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಪರಿಣಾಮ, ಆಕೆಯ ಮೇಲೆ ಎಫ್ಐಆರ್ ದಾಖಲಾಗಿದೆ.
ಕೆಲಸದಿಂದ ವಜಾ, ಕೇಸು ದಾಖಲು
ಈ ಪ್ರಕರಣ ಬೆಳಕಿನ ಬಂದ ಕೂಡಲೇ ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು, ಅಫೀಪ ಫಾತಿಮಾನನ್ನು ಕೆಲಸದಿಂದ ವಜಾ ಮಾಡಿದೆ. ಮಾತ್ರವಲ್ಲದೆ, ಆಸ್ಪತ್ರೆಯ ಹೆಚ್ಆರ್ ತಂಡ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಸಲಾಗುವದು ಎಂದು ತಿಳಿದು ಬಂದಿದೆ.
ಏನದು ಪೋಸ್ಟ್?
ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಇರುವ ಖಾಸಗಿ ಆಸ್ಪತ್ರೆಯ ವೈದ್ಯೆ ಅಫೀಪ ಫಾತಿಮಾ ಸಾಮಾಜಿಕ ಜಾಣತಾಲದಲ್ಲಿ ' HELP STINKY HINDUS BEHIND ME ( ಸಹಾಯ ಮಾಡಿ ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ ) ಮತ್ತು ಮುಂದಕ್ಕೆ AM I INDIAN - YES, DO I HATE INDIA - YES (ನಾನು ಭಾರತೀಯಳು - ಹೌದು, ನಾನು ಭಾರತವನ್ನು ದ್ವೇಷಿಸುತ್ತೇನೆ - ಹೌದು) ಎನ್ನುವ ಹಿಂದೂ ಮತ್ತು ದೇಶ ವಿರೋಧಿ ಬರೆದು ಹಾಕಿದ್ದಾಳೆ.
ಹಿಂದೂಪರ ಸಂಘಟನೆಗಳ ತೀವ್ರ ಆಕ್ರೋಶ
ಹಿಂದೂಪರ ಸಂಘಟನೆಗಳು ವೈದ್ಯೆಯ ಮನಸ್ಥಿತಿಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದು, ನಮ್ಮ ಸುತ್ತಮುತ್ತಲೇ ದೇಶ ವಿರೋಧಿ ಜನರಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಈ ರೀತಿಯ ಪೋಸ್ಟ್ ಗಳು ಜನರನ್ನು ಸಂಶಯಕ್ಕೆ ಇಡು ಮಾಡಿದೆ.
ಖಾಸಗಿ ಆಸ್ಪತ್ರೆಯಿಂದ ವಿಷಾದ
ಈ ಸಂಬಂಧ ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಎಲ್ಲರಿಗೂ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ನಿಮ್ಮ ಜಾಗರೂಕತೆ ಮತ್ತು ಸಾಂಸ್ಥಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಬದ್ಧತೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಹೈ ಲ್ಯಾಂಡ್ ಆಸ್ಪತ್ರೆ ವಿಷಾದ ವ್ಯಕ್ತಪಡಿಸಿದೆ.