20 June 2025 | Join group

ರಸ್ತೆ ಸುರಕ್ಷತೆಗಾಗಿ ಹೆಲ್ಮೆಟ್ ಮೇಳ – ಬಂಟ್ವಾಳ ತಾಲೂಕಿನಲ್ಲಿ ಸಂಚಾರಿ ನಿಯಮ ಜಾಗೃತಿ ಅಭಿಯಾನ

  • 23 Feb 2025 02:59:31 AM

Traffic Rule : ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ ಬಂಟ್ವಾಳ ಮತ್ತು ಪೊಲೀಸ್ ಇಲಾಖೆ ಬಂಟ್ವಾಳ ಉಪವಿಭಾಗ ದ.ಕ ಇದರ ಸಂಯೋಗದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ 2025 ಹೆಲ್ಮೆಟ್ ಮೇಳ ಎನ್ನುವ ಸಂಚಾರ ಸುರಕ್ಷಾ ತಿಳುವಳಿಕೆಯ ಕಾರ್ಯಕ್ರಮ ನಡೆಸಲಾಯಿತು. 

 

ದಿನದಿಂದ ದಿನಕ್ಕೆ ವಾಹನ ಚಾಲಕರ ಬೇಜವಾಬ್ದಾರಿಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.  ಪೊಲೀಸ್ ಇಲಾಖೆ ಎಷ್ಟೇ ಕಠಿಣ ನಿಯಮ ಜಾರಿಗೊಳಿಸಿದರು ಕೂಡ ಕೆಲ ವಾಹನ ಚಾಲಕರು ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡಿ ಎಡವಟ್ಟು ಮಾಡುತ್ತಿರುವ ಉದಾಹರಣೆ ದಿನಾಲೂ ನಡೆಯುತ್ತಿದೆ. 

 

ಆದರೂ ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ಪಾಲಿಸುತ್ತಲೇ ಬರುತ್ತಿದೆ. ವಾಹನ ಚಾಲಕರಿಗೆ ಸಂಚಾರಿ ನಿಯಮಗಳನ್ನು ನಿಯಮಿತವಾಗಿ ತಿಳಿಸಿಕೊಡುತ್ತಾರೆ.  ಹೆಲ್ಮೆಟ್ ಧಾರಣೆ, ಸೀಟ್ ಬೆಲ್ಟ್ ಬಳಕೆ ಇನ್ನಿತರ ಸುರಕ್ಷಿತ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಪ್ರೋತ್ಸಾಹಿಸುವುದರ ಜೊತೆಗೆ ಸಂಚಾರ ದಂಡ ಕೂಡ ಹಾಕಿ ವಾಹನ ಚಾಲಕರಿಗೆ ಎಚ್ಚರಿಕೆ ಸಂದೇಶ ನೀಡುತ್ತಾರೆ. 

 

 

ದಿನಾಂಕ 15 ರ ಫೆಬ್ರವರಿ 2025 ರಂದು, ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಬಂಟ್ವಾಳ ಆರ್.ಟಿ.ಓ ಮತ್ತು ವಿಟ್ಲ ಪೊಲೀಸ್ ಠಾಣಾ ಜಂಟಿ ಆಶ್ರಯದಲ್ಲಿ ಆರ್.ಟಿ.ಓ ಅಧಿಕಾರಿಗಳು ಹಾಗೂ ವಿಟ್ಲ ಠಾಣಾ ಪೊಲೀಸರು ವಾಹನ ಸವಾರರಿಗೆ ಹೆಲ್ಮೆಟ್‌ ಧಾರಣೆ, ಸೀಟ್‌ ಬೆಲ್ಟ್‌ ಬಳಕೆ, ಸೇರಿದಂತೆ ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ತಿಳುವಳಿಕೆ ನೀಡಿದರು.

 

ಈ ಅಭಿಯಾನದಲ್ಲಿ ಹಲವಾರು ಬೈಕ್ ಸವಾರರನ್ನು ನಿಲ್ಲಿಸಿ ಅವರಿಗೆ ಮಾರ್ಗದರ್ಶನ ನೀಡುವುದರ ಮೂಲಕ ಫೋಟೋ ಕ್ಲಿಕ್ ಮಾಡಿ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಪೊಲೀಸ್  ನ X ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್  ನಲ್ಲಿ ಪೋಸ್ಟ್ ಮಾಡಿರುತ್ತಾರೆ.