21 June 2025 | Join group

ಅಮುಲ್ ಹಾಲಿನ ದರ 2 ರೂ. ಏರಿಕೆ - ಅಮುಲ್ ಪ್ರಾಡಕ್ಟ್ ಬೆಲೆ ಕೂಡ ಹೆಚ್ಚಳ

  • 01 May 2025 12:46:36 PM

ದೇಶಾದ್ಯಂತ ಅಮುಲ್ ಹಾಲಿನ (Amul Milk) ದರ 2 ರೂ. ಏರಿಕೆಯಾಗಿದೆ. ನಂದಿನಿ ಹಾಲಿನ ಬೆಲೆ ಇತೀಚೆಗಷ್ಟೇ ಏರಿಕೆಯಾಗಿದ್ದು, ಇದೀಗ ಅಮುಲ್ ಹಾಲಿನ ದರ ಏರಿಕೆ ಗ್ರಾಹಕರಿಗೆ ಬರ ಎಳೆದಂತಾಗಿದೆ.

 

ಈ ಬೆಲೆ ಏರಿಕೆ ಇಂದಿನಿಂದ ಮೇ 1 ರಿಂದ ಜಾರಿಗೊಳಲಿದ್ದು, ಅಮುಲ್ ಹಾಲು ಮತ್ತು ಹಾಲಿಗೆ ಸಂಬಂಧಪಟ್ಟ ಎಲ್ಲಾ ಉತ್ಪನ್ನಗಳ ಬೆಲೆ ಏರಲಿದೆ.

 

ಅಮುಲ್ ತಾಜಾ ಹಾಲಿನ ಬೆಲೆ (1 ಲೀಟರ್) ಗೆ - ಹಳೆಯ ಬೆಲೆ: 53 ರೂ. ಮತ್ತು ಇದೀಗ ಹೊಸ ಬೆಲೆ: 55 ರೂ ಆಗಲಿದೆ.

 

ಕಳೆದ ವರ್ಷ ಗ್ರಾಹಕರಿಗೆ ರಿಲೀಫ್ ನೀಡಿತ್ತು ಅಮುಲ್

ಸುಮಾರು ಐದು ತಿಂಗಳ ಕಾಲ 1 ಲೀ. ಮತ್ತು 2 ಲೀ. ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಇದಲ್ಲದೆ 2025ರ ಜನವರಿಯಲ್ಲಿ 1 ಲೀ. ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.