ಭಾರತದಲ್ಲಿ ಪಾಕ್ ನಟನ ಸಿನಿಮಾದ ನಿಷೇಧಕ್ಕೆ ವಿರೋಧಿಸಿ ಪ್ರಕಾಶ್ ರಾಜ್ ಆಕ್ರೋಶ: ಪಾಕಿಸ್ತಾನದ ಪರ ಅಭಿಮಾನಿ! ಎಂದು ನೆಟ್ಟಿಗರ ಟೀಕೆ

  • 05 May 2025 01:29:37 PM

ಚಲನಚಿತ್ರ ನಟ ಪ್ರಕಾಶ್ ರಾಜ್ ಈಗಾಗಲೇ ಹಲವಾರು ವಿವಾದಗಳನ್ನು ಹುಟ್ಟಿಹಾಕಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ದ್ವೇಷಿಸುವ ಭರದಲ್ಲಿ ಹಲವಾರು ಭಾರಿ ಎಡವಟ್ಟು ಮಾಡಿದ್ದೂ ಇದೆ. ಇದೀಗ ಮತ್ತೊಂದು ವಿವಾದದ ಅಲೆ ಎಬ್ಬಿಸಿದ್ದಾರೆ ಪ್ರಕಾಶ್ ರಾಜ್ .

 

ಪಾಕ್ ನಟ ಫಾವದ್ ಖಾನ್ ನಟನೆಯ ಸಿನಿಮಾ 'ಅಬೀರ್ ಗುಲಾಲ್' ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲಿ ಭಾರತ ಸರಕಾರ ಪಾಕಿಸ್ತಾನದ ಮೇಲೆ ಹಲವಾರು ನಿರ್ಬಂಧನೆಗಳನ್ನು ಹೇರಿತ್ತು. ಅದೇ ಸಂದರ್ಭದಲ್ಲಿ ಪಾಕ್ ನಟನ ಸಿನಿಮಾ 'ಅಬೀರ್ ಗುಲಾಲ್' ವನ್ನು ಕೂಡ ಬ್ಯಾನ್ ಮಾಡಲಾಗಿತ್ತು.

 

ಆದರೆ ಪ್ರಕಾಶ್ ರಾಜ್ ಮಾತ್ರ ಈ ಚಿತ್ರ ಬ್ಯಾನ್ ಮಾಡಿದ್ದಕ್ಕೆ ಕೆಂಡಮಂಡಲಗೊಂಡಿದ್ದಾರೆ. ಭಾರತದಲ್ಲಿ ಈ ಸಿನಿಮಾ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ ಎಂದು ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.

 

ಫವಾದ್ ಖಾನ್‌ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ವಾಣಿ ಕಪೂರ್ ‘ಅಬೀರ್ ಗುಲಾಲ್’ ನಟಿಸಿದ್ದ ಈ ಸಿನಿಮಾ ಮೇ 9ಕ್ಕೆ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಭಾರತದಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದೆ.

 

ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್ ಮಾತನಾಡಿ, "ಯಾವುದೇ ಪ್ರಚಾರದ ಸಿನಿಮಾ ಆಗಿದ್ದರೂ ಯಾವುದೇ ಸಿನಿಮಾವನ್ನು ನಿಷೇಧಿಸುವುದನ್ನು ನಾನು ವಿರೋಧಿಸುತ್ತೇನೆ. ನಿಷೇಧಿಸುವ ಬಗ್ಗೆ ಜನರೇ ನಿರ್ಧರಿಸಲಿ. ನೀಲಿಚಿತ್ರ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಸಿನಿಮಾ ಅಲ್ಲ ಅಂದ್ಮೇಲೆ ನೀವು ಯಾವುದೇ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ನಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಪ್ರಕಾಶ್ ರಾಜ್ ರವರ ಈ ಹೇಳಿಕೆಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗದಿದ್ದು, ಪ್ರಕಾಶ್ ರಾಜ್ ಗೆ ಪಾಕಿಸ್ತಾನದ ಮೇಲೆ ಅತೀವ ಪ್ರೀತಿ ಇದ್ದಾಗಿದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.