23 June 2026 |

ಸುಹಾಸ್ ಶೆಟ್ಟಿ ಹ*ತ್ಯೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ ಹಿಂದೂ ಮುಖಂಡ

  • 05 May 2025 07:31:27 PM

ಮಂಗಳೂರು, ಮೇ 05: ಮಂಗಳೂರಿನ ಬಜ್ಪೆಯಲ್ಲಿ ನಡೆದ ಹಿಂದೂಪರ ಸಂಘಟನೆಯ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಹಳ ಸ್ಪೋಟಕ ಮಾಹಿತಿಯೊಂದು ಹಿಂದೂ ಮುಖಂಡ ಬಿಚ್ಚಿಟ್ಟಿದ್ದಾರೆ.

 

ಹಿಂದೂ ಜಾಗರಣ ವೇದಿಕೆ ಪ್ರಾಂತ ಕೆ ಟಿ ಉಲ್ಲಾಸ್ ರವರು, ಬಜ್ಪೆ ಪೊಲೀಸ್ ಸ್ಟೇಷನ್ ನ ಕಾನ್ಸ್ ಟೇಬಲ್ ಆಗಿರುವ ಈ ಹ*ತ್ಯೆಯಲ್ಲಿ ಭಾಗಿಯಾಗಿದ್ದರೆಂದು ಹೇಳಿದ್ದಾರೆ. ಇದರಿಂದಾಗಿ ಸುಹಾಸ್ ಪ್ರಕರಣ ದಿನಕ್ಕೊಂದು ಸ್ಪೋಟಕ ತಿರುವನ್ನು ಪಡೆಯುತ್ತಿದೆ.

 

ಬಜ್ಪೆ ಪೊಲೀಸ್ ಸ್ಟೇಷನ್ ನ ರಶೀದ್ ಈ ಕೃತ್ಯದಲ್ಲಿ ಭಾಗಿಯಾಗಿದ್ದರೆಂದು ಎಂದು ಕೆ ಟಿ ಉಲ್ಲಾಸ್ ಗಂಭೀರ ಆರೋಪ ಮಾಡಿದ್ದಾರೆ. ಹ*ತ್ಯೆಯ ಕೆಲ ದಿನಗಳ ಮುಂದೆ ಪೊಲೀಸ್ ಅಧಿಕಾರಿಗಳು ಸುಹಾಸನ್ನು ಬಜ್ಪೆ ಸ್ಟೇಷನ್ ಗೆ ಕರೆಸಿ ದೇಹ ರಕ್ಷಣೆಗೆ ಇಟ್ಟುಕೊಂಡಿದ್ದ ಎಲ್ಲ ಮಾರಕಾಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹಾಗಾಗಿ ಸುಹಾಸ್ ಹತ್ತಿರ ಯಾವುದೇ ಆಯುಧಗಳಿಲ್ಲ ಎನ್ನುವ ಸುಳಿವು ಹಂತಕರಿಗೆ ಹೇಗೆ ತಲುಪಿದೆ ಎಂದು ಪ್ರಶ್ನಿಸುವ ಮೂಲಕ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. 

 

ಈ ವಿಚಾರ ಸಂಬಂಧಪಟ್ಟಂತೆ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರಕಾರಕ್ಕೆ ಈ ವಿಷಯದ ಬಗ್ಗೆ ಸರಿಯಾದ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.