ಸುಹಾಸ್ ಹ*ತ್ಯೆ : ವಿದೇಶದಿಂದ ಹಣ ರವಾನೆಯಾಗಿರುವ ಬಗ್ಗೆ ಮಾಹಿತಿ - ಪೊಲೀಸರಿಂದ ತನಿಖೆ

  • 06 May 2025 06:29:32 PM

ಮಂಗಳೂರು, ಮೇ 06 : ನಗರದ ಬಜ್ಪೆಯಲ್ಲಿ ಮೇ 1ರಂದು ಹ*ತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶದಿಂದ ಹಣ ಹರಿದು ಬಂದಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕೊ*ಲೆಯ ಮುಖ್ಯ ಆರೋಪಿ ಆದಿಲ್ ಮೆಹರೂಫ್ 5 ಲಕ್ಷ ರುಪಾಯಿಗೆ ಡೀಲ್ ಮಾಡಿದ್ದ ಎಂದು ವರದಿಯಾಗಿತ್ತು. ಆದರೆ ಈಗ ದಿನ ಕಳೆದಂತೆ ಈ ಕೇಸ್ ಗೆ ಸಂಬಂಧಪಟ್ಟಂತೆ ಹಲವಾರು ಆತಂಕಕಾರಿ ವಿಷಯಗಳು ಹೊರಗೆ ಬರುತ್ತಿದೆ.

 

ವಿದೇಶದಿಂದ ಹೆಚ್ಚಿನ ಹಣ ಸುಹಾಸ್ ಹತ್ಯೆಗೆ ಬಂದಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಅನೇಕ ಬ್ಯಾಂಕ್ ಖಾತೆಗಳ ಪರಿಶೀಲನೆ ಆರಂಭಿಸಿದ್ದಾರೆ. ದಿನ ಕಳೆದಂತೆ ಕಾಣದ ಕೈಗಳ ಈ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡವಿದೆಯೆಂದು ನಾನಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

 

ನಿನ್ನೆಯಷ್ಟೇ ಬಜ್ಪೆ ಪೊಲೀಸ್ ಕಾನ್ಸ್ಟೇಬಲ್ ರಶೀದ್ ಎಂಬವರ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿತ್ತು. ಬಿಜೆಪಿ ಈಗಾಗಲೇ ಎಸ್‌ಡಿಪಿಐ ಯ ಕೈವಾಡ ಕೂಡ ಇದೆ ಎಂದು ಆರೋಪಿಸಿದೆ. ಇದರ ಜೊತೆಗೆ ಕಳಸದ ಉದ್ಯಮಿಯೊಬ್ಬರ ಕೈವಾಡ ಕೂಡ ಇದೆ ಎಂದು ವರದಿಯಾಗಿದೆ. ಒಟ್ಟಾರೆ ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಅಭಿಪ್ರಾಯಪಡಲಾಗಿದೆ. ತನಿಖೆ ಜಾರಿಯಲ್ಲಿದ್ದು, ಸಮಗ್ರ ಮತ್ತು ನಿಷ್ಕಲಂಶ ತನಿಖೆಯ ನಂತರ ತಿಳಿದು ಬರಬೇಕಾಗಿದೆ.