20 June 2025 | Join group

ಕಡೇಶಿವಾಲಯ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಜನವಸತಿ / ವಾರ್ಡ್ ಮತ್ತು ಗ್ರಾಮ ಸಭೆಗೆ ದಿನ ನಿಗದಿ.

  • 01 Mar 2025 03:49:12 PM

ಕಡೇಶಿವಾಲಯ, ಮಾ, 01 : ಬಂಟ್ವಾಳ ತಾಲೂಕು, ಕಡೇಶಿವಾಲಯ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಜನವಸತಿ / ವಾರ್ಡ್ ಸಭೆ ಮತ್ತು ಗ್ರಾಮ ಸಭೆಗೆ ದಿನ ನಿಗದಿಯಾಗಿದ್ದು, ಸಭೆಯ ದಿನಾಂಕವನ್ನು ನೋಟೀಸ್ ಜಾರಿಗೊಳಿಸುವುದರ ಮೂಲಕ ಗ್ರಾಮಸ್ಥರಿಗೆ ತಿಳಿಸಲಾಗಿದೆ. ಈ ಸಭೆಯ ದಿನಾಂಕ, ವಾರ್ಡ್ ಹೆಸರು ಮತ್ತು ಇನ್ನಿತರ ವಿವರ ಈ ಕೆಳಗಿನಂತಿದೆ;

 

ಶೇರಾದಲ್ಲಿ ದಿನಾಂಕ 01 ಮಾರ್ಚ್ 2025 ಶನಿವಾರ ಬೆಳಿಗ್ಗೆ 10.30 ಕ್ಕೆ ಶೇರಾ ಅಂಗನವಾಡಿ ಕೇಂದ್ರದಲ್ಲಿ ನೆರವೇರಲಿದೆ. 

ಅರಿಕಲ್ಲು, ಗುಜುರುಕ್ಕು, ಕೆಮ್ಮಾನು ಪಲ್ಕೆ, ನಚ್ಚಬೆಟ್ಟು, ಭಂಡಾರಬೆಟ್ಟು, ಕೋಡಿ, ಕಾಡಬೆಟ್ಟು, ಮುಚ್ಚಿಲ - ದಿನಾಂಕ ಮಾರ್ಚ್ 8ನೇ, ಶನಿವಾರ ಬೆಳಿಗ್ಗೆ 9.30 ಕ್ಕೆ ಕೆಮ್ಮಾನು ಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.

ಮುಂಗೂರು, ಬೊಳ್ಳಾರು, ಪಚ್ಚಡಿಬೈಲು, ಅಣ್ಣೆಂಗಳ, ಕಡೆಕೋಳಿಮಜಲು, ನಡ್ಯೋಲು - ದಿನಾಂಕ ಮಾರ್ಚ್ 8ನೇ, ಶನಿವಾರ ಬೆಳಿಗ್ಗೆ 10.00 ಗಂಟೆಗೆ ಪೆರ್ಲಾಪು ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.

ಕೊರತಿಗುರಿ, ಕುಡ್ತಕುಮೇರು, ಕೆರೆಮೂಲೆ, ಪಾಚುಕೋಡಿ - ದಿನಾಂಕ 9ನೇ ಮಾರ್ಚ್, ರವಿವಾರದಂದು ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಕೊರತಿಗುರಿ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ.

ಕಡೇಶಿವಾಲಯ ಗ್ರಾಮ ಪಂಚಾಯತ್ ಕಛೇರಿ ಸಭಾಭವನದಲ್ಲಿ, ಕಡೇಶಿವಾಲಯ ಗ್ರಾಮಪಂಚಾಯತಿನ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ದಿನಾಂಕ ಬುಧವಾರ, 12 ಮಾರ್ಚ್ 2025 ರಂದು ಜರಗಲಿರುವುದು. 

 

ಈ ಎಲ್ಲಾ ಕಾರ್ಯಕ್ರಮಗಳಿಗೆ ಆದರದ ಸ್ವಾಗತ ಬಯಸುವವರು ಸುನಿಲ್ ಕುಮಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಚಂದಪ್ಪ ನಾಯ್ಕ ಕಾರ್ಯದರ್ಶಿ (ಪ್ರಭಾರ), ಸುರೇಶ ಕಣ್ಣೊಟ್ಟು ಉಪಾಧ್ಯಕ್ಷರು, ಶ್ರೀಮತಿ ಭಾರತಿ ಎಸ್. ರಾವ್ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮತ್ತು ಸಿಬ್ಬಂದಿವರ್ಗ ಕಡೇಶಿವಾಲಯ. 

 

ಗ್ರಾಮದ ಎಲ್ಲಾ ನಾಗರಿಕರ ಗ್ರಾಮ ಮಟ್ಟದಲ್ಲಿ ನಡೆಯುವ ಸಾಮಾನ್ಯ ಸಭೆಯೇ ಗ್ರಾಮ ಸಭೆ. ಗ್ರಾಮದ ವಾರ್ಡ್ ಗಳ ಸಮಸ್ಯೆ, ಅಭಿವೃದ್ದಿ ಮತ್ತು ಗ್ರಾಮದ ಕಲ್ಯಾಣಕ್ಕಾಗಿ ಅಗತ್ಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪಂಚಾಯತ್ ಅಧ್ಯಕ್ಷರುಗಳು, ಆಯಾ ವಾರ್ಡಿನ ಮೆಂಬರ್ ಗಳು ಮತ್ತು ಗ್ರಾಮದ ನಾಗರಿಕ ಜಂಟಿ ಸಭೆ ಇದಾಗಿರುತ್ತದೆ.