ಬಂಟ್ವಾಳ: ಕಡೇಶ್ವಾಲ್ಯ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ, ಕೆದಿಲ ಗ್ರಾಮದ ಕೈಂತಾಜೆಯ ತಿರುಮಲೇಶ್ವರ ಭಟ್ ಅವರ ಜಮೀನಿನಲ್ಲಿದ್ದ ಸಾಗುವಾನಿ ಮರವನ್ನು ಖರೀದಿಸಿ, ಕೈಂತಾಜೆಯಿಂದ ಬುಡೋಲಿಯ ಯಮುನಾ ಕಂಪೌಂಡ್‌ಗೆ ಸ್ಥಳಾಂತರಿಸಲಾಗಿತ್ತು.
ನಿನ್ನೆ ಬೆಳಿಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ ಪ್ರಭಾಕರ್ ಭಟ್ ಕಲ್ಲಡ್ಕ, ಶ್ರೀ ರವಿಶಂಕರ್ ಶೆಟ್ಟಿ ಬಡಾಜೆ ಗುತ್ತು, ಅಶ್ವಿನಿ ಕುಮಾರ್ ರೈ ಬಿ.ಸಿ.ರೋಡ್, ಎನ್. ರವೀಂದ್ರ ಶೆಟ್ಟಿ ನುಳಿಯಲು, ಶ್ರೀ ಜೆ. ಕೃಷ್ಣ ಭಟ್ (ಅಧ್ಯಕ್ಷರು, ಶ್ರೀ ಉಲ್ಲಾಕುಲು ದೂಮಾವತಿ ಮಲರಾಯ ದೈವಸ್ಥಾನ), ದಕ್ಷಿಣ ಕನ್ನಡ ಜಿಲ್ಲಾ ಸದಸ್ಯರಾದ ಶ್ರೀ ರಾಘವೇಂದ್ರ ರಾವ್ ದಾಳಿಂಬ (ಕೆದಿಲ), ಧಾರ್ಮಿಕ ದತ್ತಿ ಇಲಾಖೆಯ ಜಗನ್ನಾಥ ಚೌಟ, ದೇವಪ್ಪ ಕುಲಾಲ್ ಪಂಜಿಕಲ್ಲು, ಅಪ್ರಾಯ ಪೈ ಬುಡೋಲಿ, ಕುಶಲ ಎಂ. ಪೆರಾಜೆ, ಸಂಜೀವ ಎಸ್. ಪೆರಾಜೆ, ರಘುನಾಥ್ ಸೋಮಯಾಜಿ ಮಂಗಳೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ಶೆಟ್ಟಿ ನುಳಿಯಲು, ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಡಾ. ಶ್ರೀಪತಿ ರಾವ್ ದಾಳಿಂಬ ಹಾಗೂ ಸಮಿತಿಯ ಸದಸ್ಯರು, ಗ್ರಾಮದ ಹಾಗೂ ಮಣಿನಾಲ್ಕೂರು ಮತ್ತು ಸರಪಾಡಿ ಗ್ರಾಮಗಳ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು, ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





