23 June 2026 |

ಮುಖ್ಯಮಂತ್ರಿಗೆ ಕಪ್ಪು ಬಾವುಟ, ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ: ಸುಹಾಸ್ ಕೊ*ಲೆ ಪ್ರಕರಣ ಎನ್ಐಎ ಗೆ ಒಪ್ಪಿಸಲು ಒತ್ತಾಯ

  • 16 May 2025 11:51:41 PM

ಮಂಗಳೂರು, ಮೇ 17: ಮಂಗಳೂರಿನ ಪಡೀಲ್ ನಲ್ಲಿ ಹೊಸದಾಗಿ ಕಟ್ಟಲಾದ ಡಿಸಿ ಕಚೇರಿ 'ಪ್ರಜಾಸೌಧ' ದ ಉದ್ಘಾಟನೆಗೆ ಬಂದ ರಾಜ್ಯದ ಮುಖ್ಯಮತ್ರಿ ಸಿದ್ದರಾಮಯ್ಯ ರವರಿಗೆ ಕಪ್ಪು ಬಾವುಟ ತೋರಿಸುವ ಮೂಲಕ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿದೆ.

 

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣವನ್ನು ಎನ್ಐಎ ಗೆ ಒಪ್ಪಿಸಬೇಕೆಂದು ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ಮಾಡಲಾಯಿತು. ಹೊಸ ಡಿಸಿ ಕಚೇರಿ ಉದ್ಘಾಟನೆ ಮತ್ತು ಉಳ್ಳಾಲ ದರ್ಗಾದ ಕಾರ್ಯಕ್ರಮಕ್ಕೆ ಭಾಗವಹಿಸಲು ಮುಖ್ಯಮಂತ್ರಿ ಮಂಗಳೂರು ಏರ್ಪೋರ್ಟ್ ಗೆ ಬಂದಿಳಿದ್ದಿದರು.

 

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಯೆಯ್ಯಾಡಿ ಜಮಾಯಿಸಿದ್ದು, ಮುಖ್ಯಮಂತ್ರಿ ವಾಹನ ಮಂಗಳೂರು ಏರ್ಪೋರ್ಟ್ ಕಡೆಯಿಂದ ಉರ್ವ ಮಾರ್ಕೆಟ್ ಕಡೆ ಸಾಗುತ್ತಿದ್ದ ವೇಳೆ ಕಪ್ಪು ಬಾವುಟ ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸುಹಾಸ್ ಕೊ*ಲೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ಕೈವಾಡವಿದೆ, ಆ ಹಿನ್ನಲೆಯಲ್ಲಿ ತನಿಖೆಯನ್ನು ಎನ್ಐಎ ಗೆ ಒಪ್ಪಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದಾರೆ. ಸುಹಾಸ್ ಪ್ರಕರಣದಲ್ಲಿ ಈಗಾಗಲೇ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.