23 June 2026 |

ಪಾಣೆಮಂಗಳೂರು ಚಾಕು ಇರಿತ : ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ

  • 17 May 2025 03:36:44 PM

ಬಂಟ್ವಾಳ : ನಿನ್ನೆ ಬಂಟ್ವಾಳದ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ ನಿಲ್ದಾಣದ ಬಳಿ ಚಾ*ಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್ ಪಿ ಯತೀಶ್. ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಆರೋಪಿಗಳ ಸಂಪೂರ್ಣ ಮಾಹಿತಿ ಆದಷ್ಟು ಬೇಗ ಪತ್ತೆ ಹಚ್ಚಬೇಕೆಂದು ಪೊಲೀಸರಿಗೆ ಆದೇಶ ನೀಡಿದ್ದಾರೆ.

 

ಬಂಟ್ವಾಳದ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ ನಿಲ್ದಾಣದ ಬಳಿ ಹಮೀದ್ ಯಾನೆ ಅಮ್ಮಿ ಎಂಬಾತನಿಗೆ ಶುಕ್ರವಾರ ರಾತ್ರಿ ನಾಲ್ವರು ವ್ಯಕ್ತಿಗಳ ಗುಂಪೊಂದು ಚಾಕುವಿನಿಂದ ಹ*ಲ್ಲೆ ಮಾಡಿ ಪರಾರಿಯಾಗಿತ್ತು. ಹಮೀದ್ ಕೈಗೆ ಮಾತ್ರ ಬಲವಾದ ಪೆಟ್ಟು ಬಿದ್ದಿತ್ತು ಆದರೆ ಶಸ್ತ್ರಕ್ರಿಯೆಯ ನಂತರ ಆತ ಚೇತರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

 

ನಿನ್ನೆ ಘಟನೆ ಆದ ಬೆನ್ನಲೇ ವರದಿ ಮಾಡಿದ ಪ್ರಕಾರ, ಈ ಪ್ರಕರಣ ಒಂದೇ ಕೋಮಿಗೆ ಸಂಬಂಧಪಟ್ಟಿದ್ದು, ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂದು ಊಹಿಸಲಾಗಿದೆ. ಈ ಹಿಂದೆ ಇದೆ ಪರಿಸರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಇದು ಅದರ ಮುಂದುವರಿದ ಭಾಗ ಎನ್ನಲಾಗಿದೆ.

 

ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಅನಂತಪದ್ಮನಾಭ ನೇತೃತ್ವದಲ್ಲಿ 4 ತಂಡ ರಚಿಸಿ ತಪಾಸನೆ ಆರಂಭಿಸಿದ್ದಾರೆ.

 

ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಯುವಕನಿಗೆ ಚಾಕು ಇರಿತ : ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು