23 June 2026 |

ಪಾಕಿಸ್ತಾನಕ್ಕೆ ಗುಪ್ತ ಮಾಹಿತಿ ರವಾನೆ ಮಾಡಿದ ದೇಶದ್ರೋಹದ ಆರೋಪದಲ್ಲಿ ಯೂಟ್ಯೂಬರ್ ಅರೆಸ್ಟ್

  • 18 May 2025 01:38:05 AM

ನವದೆಹಲಿ : ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರೊಂದಿಗೆ ದೇಶ ದ್ರೋಹದ ಕೆಲಸ ಮಾಡಿದ ಆರೋಪದ ಮೇಲೆ ಭಾರತದ ಯೂಟ್ಯೂಬರ್ ಒಬ್ಬಳನ್ನು ಭಾರತೀಯ ಮಿಲಿಟರಿ ಬಂಧಿಸಿದೆ. ಹರಿಯಾಣ ಮೂಲದ ಹಿಸಾರ್ ನ ಟ್ರಾವೆಲ್ ವ್ಲಾಗರ್ ಮತ್ತು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಎಂಬಾಕೆ ಬಂಧಿತ ಮಹಿಳೆ.

 

"ಟ್ರಾವೆಲ್ ವಿತ್ ಜೋ" ಎಂಬ ಹೆಸರಿನ ಈ ಯೂಟ್ಯೂಬರ್ ಪಾಕಿಸ್ತಾನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಈ ಮಹಿಳೆ ಸಂಪರ್ಕದಲ್ಲಿದ್ದಳು. ಸಂದೇಶ ಕಲಿಸುವ ಅಪ್ಲಿಕೇಶನ್‌ಗಳ ಮೂಲಕ ಈ ಯೂಟ್ಯೂಬರ್ ಪಾಕಿಸ್ತಾನಿ ಮೂಲಗಳಿಗೆ ಸಂದೇಶ ಕಳುಹಿಸುತ್ತಿದ್ದಳು ಎಂಬ ಆರೋಪದಡಿ ಬಂಧಿಸಲಾಗಿದೆ.

 

ಪೊಲೀಸ್ ಅಧಿಕಾರಿಗಳ ಪ್ರಕಾರ, ಜ್ಯೋತಿ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಬಳಸಿ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದು, ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

2023 ರಲ್ಲಿ ಪಾಕಿಸ್ತಾನಕ್ಕೆ ಮೊದಲು ಭೇಟಿ ನೀಡಿದ್ದ ಈ ಮಹಿಳೆ, ಅಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದಳು ಎಂದು ವರದಿಯಾಗಿದೆ. ಎರಡನೇ ಭೇಟಿಯಲ್ಲಿ, ಅಹ್ಸಾನ್ ಎಂಬವನ ಸಲಹೆಯ ಮೇರೆಗೆ, ಇನ್ನೊಬ್ಬ ವ್ಯಕ್ತಿ ಅಲಿ ಅಹ್ಸಾನ್ ಅವನನ್ನು ಭೇಟಿಯಾಗಿದ್ದಳು, ಆತ ಪಾಕಿಸ್ತಾನದ ಗುಪ್ತಚರ ಜಾಲದ ಸದಸ್ಯರಿಗೆ ಅವಳನ್ನು ಪರಿಚಯಿಸಿದ್ದ. ಈ ಸಮಯದಲ್ಲಿ, ಆಕೆ ಸೂಕ್ಷ್ಮ ಡೇಟಾವನ್ನು ಆತನಿಗೆ ಕಳುಹಿಸಲು ಪ್ರಾರಂಭಿಸಿದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.